ಬೆಟ್ಟಿಂಗ್ ಆ್ಯಪ್ ಪ್ರಕರಣ: ಗೂಗಲ್, ಮೆಟಾಗೆ ಈಡಿಯಿಂದ ಸಮನ್ಸ್ ಜಾರಿ
Update: 2025-07-19 14:23 IST
ಹೊಸದಿಲ್ಲಿ: ಬೆಟ್ಟಿಂಗ್ ಆ್ಯಪ್ ಗಳೊಂದಿಗೆ ಅಕ್ರಮ ಹಣ ವರ್ಗಾವಣೆ ತಳಕು ಹಾಕಿಕೊಂಡಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಗೂಗಲ್ ಹಾಗೂ ಮೆಟಾಗೆ ನೋಟಿಸ್ ಜಾರಿಗೊಳಿಸಿದೆ.
ತನಿಖೆಯ ಭಾಗವಾಗಿ ಜುಲೈ 21ರಂದು ದಿಲ್ಲಿಯಲ್ಲಿರುವ ತನ್ನ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎರಡೂ ಸಂಸ್ಥೆಗಳ ಪ್ರತಿನಿಧಿಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ಮೂಲಗಳ ಪ್ರಕಾರ, “ಗೂಗಲ್ ಹಾಗೂ ಮೆಟಾ ಸಂಸ್ಥೆಗಳು ಬೆಟ್ಟಿಂಗ್ ಆ್ಯಪ್ ಗಳನ್ನು ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಾ, ಅವು ಬಳಕೆದಾರರನ್ನು ತಲುಪುವಂತೆ ನೆರವು ಒದಗಿಸುತ್ತಿವೆ” ಎಂದು ಆರೋಪಿಸಲಾಗಿದೆ.
ಈ ಅಕ್ರಮ ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರದಲ್ಲಿ ಡಿಜಿಟಲ್ ವೇದಿಕೆಗಳ ಪಾತ್ರದ ಕುರಿತು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ.