×
Ad

ತೆಲಂಗಾಣದಲ್ಲಿ ಎಂಟು ನಕ್ಸಲರ ಶರಣಾಗತಿ

Update: 2025-05-31 21:40 IST

ಸಾಂದರ್ಭಿಕ ಚಿತ್ರ | PC : PTI

ಹೈದರಾಬಾದ್: ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಎಂಟು ಸದಸ್ಯರು ಶನಿವಾರ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಪೋಲಿಸರ ಮುಂದೆ ಶರಣಾಗಿದ್ದಾರೆ.

ಮಹಾರಾಷ್ಟ್ರ ಮತ್ತು ಛತ್ತೀಸ್ಗಡ ಮೂಲದ ಓರ್ವ ವಿಭಾಗೀಯ ಸಮಿತಿ ಸದಸ್ಯ ಮತ್ತು ಇಬ್ಬರು ಪ್ರದೇಶ ಸಮಿತಿ ಸದಸ್ಯರು ಸೇರಿದಂತೆ ಎಂಟು ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಲುಗು ಜಿಲ್ಲಾ ಪೋಲಿಸ್ ಅಧೀಕ್ಷಕ ಶಬರೀಶ ಪಿ.ಅವರ ಮುಂದೆ ಶರಣಾಗಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಈ ವರ್ಷದ ಜನವರಿಯಿಂದ ಮುಲಗು ಜಿಲ್ಲೆಯಲ್ಲಿ 68 ನಕ್ಸಲರು ಸೇರಿದಂತೆ ಒಟ್ಟು 355 ನಕ್ಸಲರು ತೆಲಂಗಾಣ ಪೋಲಿಸರಿಗೆ ಶರಣಾಗಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.

ಮಾವೋವಾದಿಗಳ ಶರಣಾಗತಿಗಾಗಿ ತೆಲಂಗಾಣ ಸರಕಾರವು ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಗೊತ್ತಾದ ಬಳಿಕ ಈ ನಕ್ಸಲರು ಬಂಡಾಯ ಮಾರ್ಗವನ್ನು ತೊರೆದು ತಮ್ಮ ಕುಟುಂಬ ಸದಸ್ಯರೊಂದಿಗೆ ಶಾಂತಿಯುತ ಜೀವನವನ್ನು ನಡೆಸಲು ನಿರ್ಧರಿಸಿ ಶರಣಾಗಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.

ತೆಲಂಗಾಣ-ಛತ್ತೀಸ್ಗಡ ಗಡಿ ಪ್ರದೇಶಗಳಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ)ನ ಸಶಸ್ತ್ರ ಸದಸ್ಯರು ಸುಳಿದಾಡುತ್ತಿದ್ದು, ಅವರೊಂದಿಗೆ ಸಹಕರಿಸದಂತೆ ಮತ್ತು ನಕ್ಸಲರ ಚಲನವಲನಗಳು ಗಮನಕ್ಕೆ ಬಂದರೆ ಪೋಲಿಸರಿಗೆ ಮಾಹಿತಿ ನೀಡುವಂತೆ ಇಲಾಖೆಯು ಗಡಿ ಗ್ರಾಮಗಳ ನಿವಾಸಿಗಳಿಗೆ ಸೂಚಿಸಿದೆ.

ಶುಕ್ರವಾರ ಛತ್ತೀಸ್ಗಡದ 17 ನಕ್ಸಲರು ತೆಲಂಗಾಣದ ಭದ್ರಾದ್ರಿ ಕೋಥಗುಂಡಂ ಜಿಲ್ಲೆಯಲ್ಲಿ ಸಿಆರ್ಪಿಎಫ್ ಗೆ ಶರಣಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News