×
Ad

ಚುನಾವಣಾ ಬಾಂಡ್‌ : ಆದೇಶ ಪಾಲನೆ ಕುರಿತು ಸುಪ್ರೀಂ ಕೋರ್ಟಿಗೆ ಅಫಿಡವಿಟ್‌ ಸಲ್ಲಿಸಿದ ಎಸ್‌ಬಿಐ ಅಧ್ಯಕ್ಷ

Update: 2024-03-13 14:23 IST

SBI , ಸುಪ್ರೀಂ ಕೋರ್ಟ್‌ | Photo: PTI 

ಹೊಸದಿಲ್ಲಿ: ಎಲೆಕ್ಟೋರಲ್‌ ಬಾಂಡ್‌ಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಕುರಿತಂತೆ ಅಫಿಡವಿಟ್‌ ಅನ್ನು ಬುಧವಾರ ಎಸ್‌ಬಿಐ ಅಧ್ಯಕ್ಷ ದಿನೇಶ್‌ ಕುಮಾರ್‌ ಖಾರಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಎಪ್ರಿಲ್‌ 14, 2019 ಮತ್ತು ಫೆಬ್ರವರಿ 15, 2024 ನಡುವೆ ಖರೀದಿಸಲಾದ ಮತ್ತು ರಿಡೀಮ್‌ ಮಾಡಲಾದ ಎಲೆಕ್ಟೋರಲ್‌ ಬಾಂಡ್‌ಗಳ ಕುರಿತ ಮಾಹಿತಿಯನ್ನು ಕೋರ್ಟ್‌ ಆದೇಶದಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಎಲೆಕ್ಟೋರಲ್‌ ಬಾಂಡ್‌ಗಳ ಖರೀದಿ, ಖರೀದಿದಾರರ ಹೆಸರುಗಳು, ಮೊತ್ತ, ನಗದೀಕರಿಸಿದ ದಿನಾಂಕ ಮತ್ತು ದೇಣಿಗೆಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳು ಸೇರಿವೆ.

ಎಪ್ರಿಲ್‌ 1, 2019 ಮತ್ತು ಫೆಬ್ರವರಿ 15, 2024 ನಡುವೆ ಒಟ್ಟು 22,217 ಎಲೆಕ್ಟೋರಲ್‌ ಬಾಂಡ್‌ಗಳನ್ನು ಖರೀದಿಸಲಾಗಿದ್ದರೆ ಅವುಗಳಲ್ಲಿ 22,030 ಬಾಂಡ್‌ಗಳನ್ನು ರಿಡೀಮ್‌ ಮಾಡಲಾಗಿದೆ ಎಂದು ಅಫಿಡವಿಟ್‌ ಹೇಳಿದೆ.

ಎಪ್ರಿಲ್‌ 1, 2019 ಮತ್ತು ಎಪ್ರಿಲ್‌ 11, 2019 ನಡುವೆ ಒಟ್ಟು 3,346 ಎಲೆಕ್ಟೋರಲ್‌ ಬಾಂಡ್‌ಗಳನ್ನು ಖರೀದಿಸಲಾಗಿದೆ ಮತ್ತು ಅವುಗಳಲ್ಲಿ 1,609 ಬಾಂಡ್‌ಗಳನ್ನು ರಿಡೀಮ್‌ ಮಾಡಲಾಗಿದೆ.

ಎಪ್ರಿಲ್‌ 12, 2019 ಮತ್ತು ಫೆಬ್ರವರಿ 15, 2024 ನಡುವೆ ಒಟ್ಟು 18,871 ಎಲೆಕ್ಟೋರಲ್‌ ಬಾಂಡ್‌ಗಳನ್ನು ಖರೀದಿಸಲಾಗಿತ್ತು ಹಾಗೂ 20,421 ಬಾಂಡ್‌ಗಳನ್ನು ರಿಡೀಮ್‌ ಮಾಡಲಾಗಿದೆ ಎಂದು ಅಫಿಡವಿಟ್‌ ಹೇಳಿದೆ.

ಮಂಗಳವಾರ ಎಲೆಕ್ಟೋರಲ್‌ ಬಾಂಡ್‌ಗಳ ಕುರಿತ ವಿವರಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿತ್ತು. ವಿವರಗಳನ್ನು ಸಲ್ಲಿಸಲು ಜೂನ್‌ 30ರವರೆಗೆ ಸಮಯಾವಕಾಶ ಕೋರಿದ್ದ ಎಸ್‌ಬಿಐ, ನಂತರ ಸುಪ್ರೀಂ ತರಾಟೆ ಹಾಗೂ ಸೂಚನೆ ಮೇರೆಗೆ ಮಂಗಳವಾರವೇ ವಿವರಗಳನ್ನು ಸಲ್ಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News