×
Ad

ಪೆಟ್ರೋಲ್, ಡೀಸೆಲ್ ಕಾರುಗಳ ಮಟ್ಟಕ್ಕೆ EV ದರ ಇಳಿಕೆ: ನಿತಿನ್ ಗಡ್ಕರಿ

Update: 2024-09-09 17:21 IST

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ | PC : PTI

ಹೊಸದಿಲ್ಲಿ : ಎರಡು ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳ (EV) ವೆಚ್ಚವು ಪೆಟ್ರೋಲ್ ವಾಹನಗಳಿಗೆ ಸಮನಾಗಿರುತ್ತದೆ. ಇದು EVಗೆ ಮುಂದಿನ ದಿನಗಳಲ್ಲಿ ಸಬ್ಸಿಡಿಯನ್ನು ತೆಗೆದುಹಾಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(ACMA)ನ 64 ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತವನ್ನು ಜಾಗತಿಕವಾಗಿ ನಂಬರ್ ಒನ್ ಆಟೋ ಉತ್ಪಾದನಾ ಕೇಂದ್ರವನ್ನಾಗಿಸುವ ದೂರದೃಷ್ಟಿಯನ್ನು ವಿವರಿಸಿದರು.

ಭಾರತವು ಆಟೋಮೋಟಿವ್ ವಲಯದಲ್ಲಿ ಜಪಾನನ್ನು ಮೀರಿಸಿ ವಿಶ್ವದ ಮೂರನೇ ಅತಿದೊಡ್ಡ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. USA ಮತ್ತು ಚೀನಾ ಮೊದಲ ಎರಡು ಸ್ಥಾನದಲ್ಲಿದೆ. ದೇಶದ ವಾಹನೋದ್ಯಮವು 9 ಪ್ರತಿಶತದಷ್ಟು ಪ್ರಭಾವಶಾಲಿ ದರದಲ್ಲಿ ಬೆಳೆಯುತ್ತಿದೆ. ಮುಂದಿನ 2-3 ವರ್ಷಗಳಲ್ಲಿ 10 ಪ್ರತಿಶತಕ್ಕೆ ಹೆಚ್ಚಿಸುವ ಸಾಮರ್ಥ್ಯವಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ವೆಚ್ಚ ಉಳಿಸುವ ಇಂಧನ ತಂತ್ರಜ್ಞಾನಗಳು ಮತ್ತು ಕಡಿಮೆ ಮಾಲಿನ್ಯಕಾರಕ ಪರ್ಯಾಯಗಳನ್ನು ಉತ್ತೇಜಿಸಲು ಸರ್ಕಾರದ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದರು.

ಸ್ಕ್ರ್ಯಾಪೇಜ್ ನೀತಿಗಳು ಕಡಿಮೆ ವೆಚ್ಚಕ್ಕೆ ಕಾರಣವಾಗುತ್ತವೆ. ಸ್ಕ್ರ್ಯಾಪಿಂಗ್ ನೀತಿಗಳ ಮೇಲೆ ಸರ್ಕಾರವು ಗಮನಹರಿಸುವುದರಿಂದ ಅಲ್ಯೂಮಿನಿಯಂ, ತಾಮ್ರ, ಉಕ್ಕು ಮತ್ತು ರಬ್ಬರ್‌ನಂತಹ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ಉತ್ಪಾದನಾ ವೆಚ್ಚವನ್ನು 30 ಪ್ರತಿಶತದಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದರು.

ಗ್ರಾಹಕರು ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದಾಗ ಹೊಸ ವಾಹನಗಳ ಮೇಲೆ ಶೇಕಡಾ 3 ರಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.

ಈ ನೀತಿಯು ಹೊಸ ವಾಹನಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ಉತ್ಪಾದನಾ ವೆಚ್ಚವೂ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಿದೆ ಎಂದು ಗಡ್ಕರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News