ತೆಲಂಗಾಣ: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಹಮ್ಮದ್ ಅಝರುದ್ದೀನ್
ರೇವಂತ್ ರೆಡ್ಡಿ ಸಚಿವ ಸಂಪುಟದ ಏಕೈಕ ಮುಸ್ಲಿಂ ಸಚಿವ
Update: 2025-10-31 15:30 IST
Photo credit: X/@tg_governor
ಹೈದರಾಬಾದ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅವರು ತೆಲಂಗಾಣ ಸರಕಾರದ ಸಚಿವರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಜಿಷ್ಣು ದೇವ್ ಶರ್ಮ ಅವರು ಅಝರುದ್ದೀನ್‌ಗೆ ಪ್ರಮಾಣ ವಚನ ಬೋಧಿಸಿದರು.
ತೆಲಂಗಾಣ ಸರಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ, ರೇವಂತ್ ರೆಡ್ಡಿ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಏಕೈಕ ಸಚಿವರಾಗಿ ಅಝರುದ್ದೀನ್ ಸೇರ್ಪಡೆಯಾದರು.