×
Ad

ಭ್ರಷ್ಟಾಚಾರ ಆರೋಪ: ಶ್ರೀಲಂಕಾದ ಮಾಜಿ ಅಧ್ಯಕ್ಷ ರಾಜಪಕ್ಸೆ ಪುತ್ರನ ಬಂಧನ

Update: 2025-01-25 17:09 IST

ಮಹಿಂದಾ ರಾಜಪಕ್ಸೆ / ಯೋಶಿತಾ ರಾಜಪಕ್ಸೆ (Photo credit: X/@YoshithaR, PTI)

ಕೊಲೊಂಬೊ: ಆಸ್ತಿ ಖರೀದಿ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಪುತ್ರ ಯೋಶಿತಾ ರಾಜಪಕ್ಸೆಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ತಮ್ಮ ತಂದೆ ಅಧ್ಯಕ್ಷರಾಗಿದ್ದಾಗ, 2015ಕ್ಕೂ ಮುಂಚೆ ಖರೀದಿಸಲಾಗಿದ್ದ ಆಸ್ತಿ ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಆಧರಿಸಿ ನಡೆಯುತ್ತಿದ್ದ ತನಿಖೆಯ ಭಾಗವಾಗಿ ಮಾಜಿ ನೌಕಾಪಡೆ ಅಧಿಕಾರಿಯಾದ ಯೋಶಿತಾರನ್ನು ಅವರ ತವರು ಪ್ರಾಂತ್ಯವಾದ ಬೆಲಿಯಾಟ್ಟದಿಂದ ಬಂಧಿಸಲಾಗಿದೆ.

ಮಹಿಂದಾ ರಾಜಪಕ್ಸೆಯ ಮೂವರು ಮಕ್ಕಳ ಪೈಕಿ ಯೋಶಿತಾ ಎರಡನೆ ಪುತ್ರರಾಗಿದ್ದಾರೆ.

ಇದೇ ಆಸ್ತಿ ಪ್ರಕರಣದಲ್ಲಿ ಕಳೆದ ವಾರ ಯೋಶಿತಾರ ಚಿಕ್ಕಪ್ಪ ಗೊಟಬಯ ರಾಜಪಕ್ಸೆಯನ್ನೂ ದಕ್ಷಿಣ ಧಾರ್ಮಿಕ ರೆಸಾರ್ಟ್ ನಲ್ಲಿನ ವಿಶ್ರಾಂತಿ ಧಾಮದಲ್ಲಿ ಪೊಲೀಸರು ವಿಚಾರಣೆಗೊಳಪಡಿಸಿದ್ದರು.

ಕಳೆದ ತಿಂಗಳು ತಮ್ಮ ಭದ್ರತೆಯನ್ನು ಗಮನಾರ್ಹವಾಗಿ ತಗ್ಗಿಸಿರುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ, ಮಹಿಂದಾ ರಾಜಪಕ್ಸೆ ಸುಪ್ರೀಂ ಕೋರ್ಟ್ ನಲ್ಲಿ ಮೂಲಭೂತ ಹಕ್ಕು ಅರ್ಜಿಯನ್ನು ಸಲ್ಲಿಸಿ, ತಮ್ಮ ಭದ್ರತೆಯನ್ನು ಮರುಸ್ಥಾಪಿಸಲು ಮಧ್ಯಪ್ರವೇಶಿಸಬೇಕು ಎಂದು ನ್ಯಾಯಾಲಯವನ್ನು ಮನವಿ ಮಾಡಿರುವ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News