×
Ad

ವಿನೇಶ್‌ ಫೋಗಟ್‌ ಅನರ್ಹತೆ ವಿರುದ್ಧ ಅಪೀಲು ಸಲ್ಲಿಸುವ ಎಲ್ಲಾ ಆಯ್ಕೆ ಅನ್ವೇಷಿಸಿ: ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ಗೆ ಕೋರಿದ ಪ್ರಧಾನಿ ಮೋದಿ

Update: 2024-08-07 14:11 IST

ನರೇಂದ್ರ ಮೋದಿ , ವಿನೇಶ್‌ ಫೋಗಟ್‌ | PTI 

ಹೊಸದಿಲ್ಲಿ: ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಕೆಲವು ಗ್ರಾಂ ತೂಕ ಹೆಚ್ಚಿದ್ದಾರೆಂಬ ಕಾರಣಕ್ಕೆ ಇಂದು ನಡೆಯಬೇಕಿದ್ದ 50 ಕೆಜಿ ಕುಸ್ತಿ ಪಂದ್ಯದ ಫೈನಲ್‌ನಿಂದ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ಅನ್ನು ಸಂಪರ್ಕಿಸಿ ಅನರ್ಹತೆಯ ವಿರುದ್ಧ ಅಪೀಲು ಸಲ್ಲಿಸುವ ಎಲ್ಲ ಆಯ್ಕೆಗಳನ್ನು ಅನ್ವೇಷಿಸುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಖುದ್ದಾಗಿ ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ಮುಖ್ಯಸ್ಥೆ ಪಿ.ಟಿ. ಉಷಾ ಅವರೊಂದಿಗೆ ಮಾತನಾಡಿ, ಅಗತ್ಯ ಬಿದ್ದರೆ ಅನರ್ಹತೆಯ ವಿರುದ್ಧ ಬಲವಾದ ವಿರೋಧ ವ್ಯಕ್ತಪಡಿಸುವಂತೆ ತಿಳಿಸಿದ್ದಾರೆ.

ಆದರೆ ಒಮ್ಮೆ ಒಲಿಂಪಿಕ್‌ ಸಮಿತಿ ಓರ್ವ ಕ್ರೀಡಾಳುವನ್ನು ಅನರ್ಹಗೊಳಿಸಿದ ನಂತರ ಮತ್ತೆ ಅರ್ಹರನ್ನಾಗಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ ವಿನೇಶ್‌ ಫೋಗಟ್‌ ಇಂದು ಫೈನಲ್‌ ಆಡಬೇಕಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News