×
Ad

ಹವಾಮಾನ ವೈಪರೀತ್ಯ: ರಾಂಬನ್ ನಲ್ಲಿ ಸಿಲುಕಿಕೊಂಡ 6,000 ಅಮರನಾಥ ಯಾತ್ರಾರ್ಥಿಗಳು

Update: 2023-07-09 12:31 IST

ಹೊಸದಿಲ್ಲಿ: ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಜುಲೈ 8 ರಂದು ಸ್ಥಗಿತಗೊಳಿಸಿದ್ದರಿಂದ ಸುಮಾರು 6,000 ಅಮರನಾಥ ಯಾತ್ರಾರ್ಥಿಗಳು ಜಮ್ಮು-ಕಾಶ್ಮೀರದ ರಾಂಬನ್ ಪಟ್ಟಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ಯಾತ್ರಿಕರನ್ನು 'ಯಾತ್ರಿ ನಿವಾಸ'ಕ್ಕೆ ಸ್ಥಳಾಂತರಿಸಲಾಯಿತು ಮತ್ತು ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಕ್ಯಾಂಟೀನ್ ಮತ್ತು ವೈದ್ಯಕೀಯ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾತ್ರೆ ಪುನರಾರಂಭವಾಗುವವರೆಗೂ ಯಾತ್ರಾರ್ಥಿಗಳ ವ್ಯವಸ್ಥೆ ಬಗ್ಗೆಯೂ ಗಮನಹರಿಸಲಾಗಿದೆ.

.''ಅಮರನಾಥ ಯಾತ್ರೆಯನ್ನು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ನಿನ್ನೆ ಸ್ಥಗಿತಗೊಳಿಸಲಾಗಿತ್ತು. ಯಾತ್ರಿಕರಿಗೆ ಇಲ್ಲಿ 'ಯಾತ್ರಿ ನಿವಾಸ'ದಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿವೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ’’ ಎಂದು ರಾಂಬನ್ ನ ಡೆಪ್ಯುಟಿ ಕಮಿಷನರ್ ಮುಸರತ್ ಇಸ್ಲಾಂ ಹೇಳಿದರು.

ಗಮನಾರ್ಹ ವಿಚಾರವೆಂದರೆ, ಈ ಪ್ರದೇಶದಲ್ಲಿ ಸಾಧಾರಣ ಮತ್ತು ಭಾರೀ ಮಳೆಯಾಗುತ್ತಿದ್ದು, ನಂತರ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಜುಲೈ 1 ರಂದು ಯಾತ್ರೆ ಪ್ರಾರಂಭವಾದಾಗಿನಿಂದ ಒಟ್ಟು 67,566 ಯಾತ್ರಿಕರು ಅಮರನಾಥ ಗುಹೆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಜುಲೈ 5 ರಂದು ಸುಮಾರು 18,354 ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್ ನಿಂದ ಅಮರನಾಥ ಗುಹೆಗೆ ತೆರಳಿ ದರ್ಶನ ಪಡೆದರು. 62 ದಿನಗಳ ಅವಧಿಯ ಶ್ರೀ ಅಮರನಾಥ ಯಾತ್ರೆಯು ಆಗಸ್ಟ್ 31, 2023 ರಂದು ಮುಕ್ತಾಯಗೊಳ್ಳಲಿದೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News