×
Ad

ಬ್ರಿಟನ್ ಪ್ರಜೆಗಳಿಗೆ ನಕಲಿ ವಿಮಾ ಪಾಲಿಸಿ ಮಾರಾಟ | ನಾಸಿಕ್‌ ನ ಕಾಲ್ ಸೆಂಟರ್‌ಗಳ ಮೇಲೆ ಸಿಬಿಐ ದಾಳಿ

Update: 2025-09-14 22:52 IST

ಸಾಂದರ್ಭಿಕ ಚಿತ್ರ

ಮುಂಬೈ, ಸೆ. 14: ಬ್ರಿಟನ್ ಪ್ರಜೆಗಳಿಗೆ ನಕಲಿ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಎರಡು ಅಕ್ರಮ ಕಾಲ್ ಸೆಂಟರ್‌ ಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಸ್ವಾಗನ್ ಬ್ಯುಸಿನಸ್ ಸೊಲ್ಯುಷನ್ಸ್ ಹೆಸರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಕಾಲ್ ಸೆಂಟರ್‌ಗಳು ವಿಮಾ ಏಜೆಂಟರಂತೆ ಅಥವಾ ಸರಕಾರಿ ಅಧಿಕಾರಿಗಳಂತೆ ನಟಿಸುವ ಮೂಲಕ ಬ್ರಿಟನ್ ಪ್ರಜೆಗಳನ್ನು ವಂಚಿಸುತ್ತಿತ್ತು. ಅಲ್ಲದೆ ಹಣಕಾಸು ವಿವರಗಳನ್ನು ಹಂಚಿಕೊಳ್ಳುವಂತೆ ಅಥವಾ ನಕಲಿ ವಿಮಾನ ಪಾಲಿಸಿಗಳಿಗೆ ಪಾವತಿಸುವಂತೆ ಅವರನ್ನು ಮನವೊಲಿಸುತ್ತಿತ್ತು.

ಆರೋಪಿಗಳು ಏಜಂಟರು ಅಥವಾ ಅಧಿಕಾರಿಗಳ ಸೋಗಿನಲ್ಲಿ ಬ್ರಿಟನ್ ಪ್ರಜೇಗಳನ್ನು ಸಂಪರ್ಕಿಸುತ್ತಿದ್ದರು ಹಾಗೂ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮಾಹಿತಿಯನ್ನು ಬಹಿರಂಗಪಡಿಸುವಂತೆ ಅವರ ಮನವೊಲಿಸುತ್ತಿದ್ದರು.

ಸಿಬಿಐ ಅಧಿಕಾರಿಗಳು ನಾಸಿಕ್ ಹಾಗೂ ಕಲ್ಯಾಣ್ (ಥಾಣೆ)ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಸಂತ್ರಸ್ತರ ದತ್ತಾಂಶ ಹಾಗೂ ನಕಲಿ ಇನ್ಸೂರೆನ್ಸ್ ಪಾಲಿಸಿಯ ಸ್ಕ್ರಿಪ್ಟ್ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 8 ಮೊಬೈಲ್ ಫೋನ್, 8 ಕಂಪ್ಯೂಟರ್, ಸರ್ವರ್ ಹಾಗೂ 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ನಕಲಿ ಕಾಲ್ ಸೆಂಟರ್ ನಡೆಸುತ್ತಿರುವ ಆರೋಪದಲ್ಲಿ ನಾಲ್ವರು ವ್ಯಕ್ತಿಗಳು, ಅನಾಮಿಕ ಸರಕಾರಿ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಸೆಪ್ಟಂಬರ್ 11ರಂದು ಪ್ರಕರಣ ದಾಖಲಿಸಲಾಗಿತ್ತು.

ಬ್ರಿಟನ್‌ ನ ಪ್ರಜೆಗಳನ್ನು ದಾರಿ ತಪ್ಪಿಸಲು ವಿಒಐಪಿ (ವಾಯ್ಸ್ ಓವರ್ ಇಂಟರ್‌ನೆಟ್ ಪ್ರೊಟೊಕಾಲ್), ನಕಲಿ ಫೋನ್ ನಂಬರ್ ಹಾಗೂ ನಕಲಿ ದಾಖಲೆಗಳನ್ನು ಬಳಸುವ ಮೂಲಕ ಸುಮಾರು 60 ಉದ್ಯೋಗಿಗಳು ಈ ದಂಧೆ ನಡೆಸಿದ್ದಾರೆ.

ಸೆಪ್ಟಂಬರ್ 13ರಂದು ಬಂಧಿಸಲಾದ ಇಬ್ಬರು ವ್ಯಕ್ತಿಗಳನ್ನು ಗಣೇಶ್ ಹಾಗೂ ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಥಾಣೆಯಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅವರಿಗೆ ನ್ಯಾಯಾಲಯ ಸೆಪ್ಟಂಬರ್ 15ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

ಬ್ರಿಟನ್ ಪ್ರಜೆಗಳಿಗೆ ನಕಲಿ ವಿಮಾ ಪಾಲಿಸಿ ಮಾರಾಟ | ನಾಸಿಕ್‌ ನ ಕಾಲ್ ಸೆಂಟರ್‌ಗಳ ಮೇಲೆ ಸಿಬಿಐ ದಾಳಿ(w/f)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News