×
Ad

ಅನುಪಮ್ ಖೇರ್ ಚಿತ್ರವಿರುವ ಖೋಟಾ ನೋಟನ್ನು ಬಳಸಿ ರೂ. 1.3 ಕೋಟಿ ವಂಚನೆ!

Update: 2024-09-30 14:11 IST

Photo credit: X

ಅಹಮದಾಬಾದ್: 2.1 ಕೆಜಿ ಚಿನ್ನವನ್ನು ರೂ. 1.6 ಕೋಟಿಗೆ ಖರೀದಿಸುವುದಾಗಿ ನಂಬಿಸಿರುವ ದುಷ್ಕರ್ಮಿಗಳು, ನಂತರ, ಅನುಪಮ್ ಖೇರ್ ಚಿತ್ರವಿರುವ ರೂ. 1.3 ಕೋಟಿ ಮೌಲ್ಯದ ಖೋಟಾ ನೋಟನ್ನು ನೀಡಿ ಪರಾರಿಯಾಗಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಈ ಸಂಬಂಧ, ಮೆಹುಲ್ ಠಕ್ಕರ್ ಎಂಬುವವರು ಸೆಪ್ಟೆಂಬರ್ 24ರಂದು ನವರಂಗ್ ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರುದಾರರ ಪ್ರಕಾರ, ಕೇವಲ ಎರಡು ದಿನಗಳ ಹಿಂದಷ್ಟೆ ತಾತ್ಕಾಲಿಕವಾಗಿ ಪ್ರಾರಂಭಗೊಂಡಿದ್ದ ಕಚೇರಿಯ ಪ್ರಶಾಂತ್ ಪಟೇಲ್ ಎಂಬವರು, ರೂ. 1.6 ಕೋಟಿ ಬೆಲೆ ಬಾಳುವ 2.1 ಕೆಜಿ ಚಿನ್ನವನ್ನು ಖರೀದಿಸುವುದಾಗಿ ಸಂಪರ್ಕಿಸಿದ್ದಾರೆ. ಅಷ್ಟು ದೊಡ್ಡ ಮೊತ್ತದ ನಗದು ವರ್ಗಾವಣೆ ಮಾಡಲು ಸಾಧ್ಯವಿಲ್ಲದೆ ಇರುವುದರಿಂದ ನಗದು ರೂಪದಲ್ಲಿ ರೂ. 1.3 ಕೋಟಿ ಮೊತ್ತವನ್ನು ನೀಡುವುದಾಗಿ ಹೇಳಿದ್ದಾರೆ. ಉಳಿಕೆ ರೂ. 30 ಲಕ್ಷವನ್ನು ನಾಳೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅದರಂತೆ, 26 ಕಟ್ಟು ನಗದನ್ನು ಠಕ್ಕರ್ ಗೆ ನೀಡಿರುವ ಇಬ್ಬರು ಆರೋಪಿಗಳು, ಅದನ್ನು ನಗದು ಯಂತ್ರದಲ್ಲಿ ಪರೀಕ್ಷಿಸುವಂತೆ ಸೂಚಿಸಿ, ಉಳಿಕೆ ಮೊತ್ತವನ್ನು ತರುವವರಂತೆ ಹೊರಗೆ ಹೋಗಿದ್ದಾರೆ. ಅವರು ನೀಡಿರುವ ನಗದು ಖೋಟಾ ನೋಟು ಎಂದು ಠಕ್ಕರ್ ಗೆ ಮನವರಿಕೆಯಾಗುವ ವೇಳೆಗೆ, ಶಂಕಿತ ಆರೋಪಿಗಳು 2.1 ಕೆಜಿ ಚಿನ್ನದೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಘಟನೆಯ ವಿಡಿಯೊವನ್ನು ಹಂಚಿಕೊಂಡಿರುವ ಬಾಲಿವುಡ್ ನಟ ಅನುಪಮ್ ಖೇರ್, “ರೂ. 500ರ ನೋಟಿನ ಮೇಲೆ ಮಹಾತ್ಮ ಗಾಂಧಿಯ ಚಿತ್ರದ ಬದಲು ನನ್ನ ಚಿತ್ರ? ಏನು ಬೇಕಾದರೂ ಆಗಬಹುದು” ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News