×
Ad

ಒಡಿಶಾ ಕರಾವಳಿಯಲ್ಲಿ ರೈಲಿನಿಂದ ಉಡಾಯಿಸಬಹುದಾದ ಅಗ್ನಿ-ಪ್ರೈಂ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ಭಾರತದಲ್ಲಿ ನಡೆದ ಮೊದಲ ಪ್ರಯೋಗ

Update: 2025-09-25 11:57 IST

Photo :X/@rajnathsingh

ಹೊಸದಿಲ್ಲಿ : ಒಡಿಶಾದ ಕರಾವಳಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಗ್ನಿ-ಪ್ರೈಂ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಭಾರತದ ಮೊದಲ ಪ್ರಯೋಗವಾಗಿದೆ.

ರೈಲಿನಿಂದ ಉಡಾಯಿಸಬಹುದಾದ ಈ ಕ್ಷಿಪಣಿಯ ಪರೀಕ್ಷೆಯನ್ನು ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ನಡೆಸಲಾಗಿದೆ.

ಈ ಕುರಿತು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯನ್ನು ಅಭಿನಂದಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತವು ರೈಲಿನಿಂದ ಉಡಾಯಿಸಬಹುದಾದ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಅಗ್ನಿ-ಪ್ರೈಂ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಹೇಳಿದ್ದಾರೆ.

ಇದು ರೈಲು ಜಾಲದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬಳಕೆದಾರರಿಗೆ ದೇಶಾದ್ಯಂತ ಚಲನಶೀಲತೆಯನ್ನು ಹೊಂದಲು ಮತ್ತು ಕ್ಷೀಣ ಗೋಚರ ಪರಿಸ್ಥಿತಿಯಲ್ಲಿ ಕಡಿಮೆ ಪ್ರತಿಕ್ರಿಯೆ ಸಮಯದಲ್ಲಿ ಉಡಾವಣೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News