×
Ad

20 ಕೋಟಿ ರೂ.ಹಫ್ತಾಕ್ಕಾಗಿ ಆರ್‌ಜೆಡಿ ಸಂಸದನಿಗೆ ಅಮೆರಿಕದಿಂದ ಗ್ಯಾಂಗ್‌ ಸ್ಟಾರ್ ಬೆದರಿಕೆ ಕರೆ

Update: 2025-01-19 21:56 IST

ಸಂಸದ ಸಂಜಯ್ ಯಾದವ್ | PC :  X \ @sanjuydv

ಹೊಸದಿಲ್ಲಿ: ಅಮೆರಿಕದಲ್ಲಿಯ ಗ್ಯಾಂಗ್‌ಸ್ಟರ್‌ ನೋರ್ವ 20 ಕೋಟಿ ರೂ.ಹಫ್ತಾಹಣವನ್ನು ನೀಡುವಂತೆ ತನಗೆ ಕರೆಯನ್ನು ಮಾಡಿದ್ದಾನೆ ಎಂದು ಆರ್‌ಜೆಡಿಯ ರಾಜ್ಯಸಭಾ ಸಂಸದ ಸಂಜಯ್ ಯಾದವ್ ಆರೋಪಿಸಿದ್ದಾರೆ.

ಹಣವನ್ನು ನೀಡದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸುವಂತೆ ಆತ ಎಚ್ಚರಿಕೆ ನೀಡಿದ್ದಾನೆ ಎಂದು ಯಾದವ್ ತಿಳಿಸಿದರು.

‘ನನ್ನ ಸಹಾಯಕನ ಮೊಬೈಲ್‌ಗೆ ಕರೆ ಬಂದಿದ್ದು,ಕರೆ ಮಾಡಿದ್ದ ವ್ಯಕ್ತಿಯು ನನ್ನೊಂದಿಗೆ ಮಾತನಾಡಬೇಕೆಂದು ಕೋರಿದ್ದ. ಸಹಾಯಕ ಮೊಬೈಲ್‌ ನ್ನು ನನಗೆ ನೀಡಿದ್ದು,ವ್ಯಕ್ತಿಯು ತಾನು ಗ್ಯಾಂಗ್‌ಸ್ಟರ್ ಆಗಿದ್ದೇನೆ ಮತ್ತು ತನ್ನ ಜನರು ಜೈಲಿನಲ್ಲಿದ್ದಾರೆ ಎಂದು ಹೇಳಿಕೊಂಡಿದ್ದ. ತಾನು ಅಮೆರಿಕದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದ ಆತ 20 ಕೋಟಿ .

ರೂ.ಗಳನ್ನು ನೀಡದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ ಎಂದಿದ್ದ. ಆತ ನನ್ನನ್ನು ಅಪಹರಿಸಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ’ ಎಂದು ಯಾದವ್ ಪೋಲಿಸ್ ದೂರಿನಲ್ಲಿ ತಿಳಿಸಿದ್ದಾರೆ.

‘ಆತ ನನ್ನ ಮಕ್ಕಳಿಗೂ ಅಪಾಯವನ್ನುಂಟು ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ’ ಎಂದೂ ಯಾದವ್ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News