×
Ad

ಅಮೆರಿಕದಲ್ಲಿನ ಲಂಚ ಪ್ರಕರಣ 'ಇತ್ಯರ್ಥ'ಗೊಳಿಸಲು ಟ್ರಂಪ್ ಸರಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ ಗೌತಮ್ ಅದಾನಿ ಪ್ರತಿನಿಧಿಗಳು : ವರದಿ

Update: 2025-05-05 15:15 IST

ಗೌತಮ್ ಅದಾನಿ (Photo: PTI)

ಹೊಸದಿಲ್ಲಿ: ಅಮೆರಿಕದಲ್ಲಿನ ಲಂಚ ಪ್ರಕರಣವನ್ನು 'ಇತ್ಯರ್ಥ'ಗೊಳಿಸಲು ಟ್ರಂಪ್ ಸರಕಾರದ ಅಧಿಕಾರಿಗಳನ್ನು  ಬಿಲಿಯನೇರ್ ಗೌತಮ್ ಅದಾನಿ ಪ್ರತಿನಿಧಿಗಳು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಲಂಚ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ವಿರುದ್ಧ ದಾಖಲಾದ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸುವ ಶತಾಯಗತ ಪ್ರಯತ್ನದ ಭಾಗವಾಗಿ ಅದಾನಿಯ ತಂಡವು ಭೇಟಿ ಮಾಡಿತು ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ ಪ್ರಾರಂಭವಾದ ಈ ಮಾತುಕತೆಯು ಪ್ರಗತಿಯಲ್ಲಿದದೆ. ಮುಂಬರುವ ದಿನಗಳಲ್ಲಿ ಒಂದು ನಿರ್ಣಯವನ್ನು ತಲುಪುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಉಲ್ಲೇಖಿಸಿ Reuters ವರದಿ ಮಾಡಿದೆ.

ಅದಾನಿ ಅವರ ತಂಡವು ಟ್ರಂಪ್ ಅವರ ಸರ್ಕಾರವು ಮೊಕದ್ದಮೆ ಮರುಪರಿಶೀಲಿಸಬೇಕು ಎಂದು ವಾದಿಸುತ್ತಿದೆ ಎಂದು ವರದಿಯಾಗಿದೆ.

ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು ಕಳೆದ ವರ್ಷ ವಿದ್ಯುತ್ ಸರಬರಾಜು ಒಪ್ಪಂದಗಳನ್ನು ಪಡೆಯಲು ಲಂಚ ನೀಡಿದ್ದಾರೆ. ಯೋಜನೆಗೆ ನಿಧಿ ಸಂಗ್ರಹದ ಸಮಯದಲ್ಲಿ ಅಮೆರಿಕದ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದರು.

ಅದಾನಿ ಗ್ರೀನ್ ಎನರ್ಜಿಯಿಂದ 750 ಮಿಲಿಯನ್ ಡಾಲರ್ ಒಪ್ಪಂದದ ಸಮಯದಲ್ಲಿ, ಅಧಿಕಾರಿಗಳಿಗೆ ಲಕ್ಷಾಂತರ ಲಂಚವನ್ನು ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.

ಅದಾನಿ ಗ್ರೂಪ್, ಅಮೆರಿಕದ ನ್ಯಾಯ ಇಲಾಖೆ, ಶ್ವೇತಭವನದ ಪ್ರತಿನಿಧಿಗಳು ಈ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News