×
Ad

ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆ: ಆಝಾದ್ ನೇತೃತ್ವದ ಡಿಪಿಎಪಿಯ 13 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Update: 2024-08-25 22:20 IST

Photo : PTI

ಶ್ರೀನಗರ : ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ತನ್ನ 13 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುಲಾಂ ನಬಿ ಆಝಾದ್ ನೇತೃತ್ವದ ‘ಡೆಮಾಕ್ರಾಟಿಕ್ ಪ್ರೊಗ್ರೆಸಿವ್ ಆಝಾದ್ ಪಾರ್ಟಿ ’(ಡಿಪಿಎಪಿ) ರವಿವಾರ ಬಿಡುಗಡೆಗೊಳಿಸಿದೆ.

ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿಯೂ ಆದ ಗುಲಾಂ ನಬಿ ಆಝಾದ್ ಸ್ಥಾಪಿಸಿರುವ ಡಿಪಿಎಪಿ ಪಕ್ಷಕ್ಕೆ ಇದು ಚೊಚ್ಚಲ ವಿಧಾನಸಭಾ ಚುನಾವಣೆಯಾಗಿದೆ. ಪಕ್ಷದ ಪ್ರಧಾನ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಚಿಬ್ ಶ್ರೀನಗರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ದೋಡಾ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಜಮ್ಮಕಾಶ್ಮೀರದ ಮಾಜಿ ಸಚಿವ ಅಬ್ದುಲ್ ಮಜೀದ್ ವಾನಿ, ದೇವಸರ್‌ನಿಂದ ಮಾಜಿ ಶಾಸಕ ಮುಹಮ್ಮದ್ ಆಮೀನ್ ಭಟ್, ಭದೇರ್‌ವಾಹ್‌ನಿಂದ ಜಮ್ಮುಕಾಶ್ಮೀರದ ಮಾಜಿ ಅಡ್ವೋಕೇಟ್ ಜನರಲ್ ಮುಹಮ್ಮದ್ ಅಸ್ಲಾಂ ಘನಿ, ಡೂರು ಕ್ಷೇತ್ರದಿಂದ ಡಿಸಿಸಿ ಸದಸ್ಯ ಸಲೀಂ ಪಾರ್ರೆ ಹಾಗೂ ಲೋಲಬ್‌ನಿಂದ ಮುನೀರ್ ಅಹ್ಮದ್ ಮೀರ್ ಸೇರಿದಂತೆ 13 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಡಿಪಿಎಪಿ ಪ್ರಕಟಿಸಿದೆ.

ಜಮ್ಮುಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಸೆಪ್ಟೆಂಬರ್ 18ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News