×
Ad

ಮುಂಬೈ: ಬುರ್ಖಾ ಧರಿಸಿದ್ದಕ್ಕೆ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಣೆ; ಪ್ರತಿಭಟನೆ ನಂತರ ಅನುಮತಿ

Update: 2023-08-03 12:30 IST

ಮುಂಬೈ: ನಗರದ ಚೆಂಬೂರ್‌ ಪ್ರದೇಶದಲ್ಲಿರುವ ಖಾಸಗಿ ಕಾಲೇಜೊಂದಕ್ಕೆ ಬುರ್ಖಾ ಧರಿಸಿ ಆಗಮಿಸಿದ್ದ ಕೆಲ ಮುಸ್ಲಿಂ ವಿದ್ಯಾರ್ಥಿಯನಿಯರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ತಡೆಯೊಡ್ಡಿದ ಘಟನೆ ವರದಿಯಾಗಿದೆ. ನಂತರ ಪೋಷಕರು, ವಿದ್ಯಾರ್ಥಿಗಳು ಮತ್ತು ಪೊಲೀಸರ ಹಸ್ತಕ್ಷೇಪದ ನಂತರ ಅವರಿಗೆ ಪ್ರವೇಶ ನೀಡಲಾಯಿತು.

ಘಟನೆ ಬುಧವಾರ ನಡೆದಿದೆ. ಕಾಲೇಜು ಸಮವಸ್ತ್ರ ನೀತಿ ಹೊಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ ಕಾಲೇಜಿನ ಗೇಟಿನ ಹೊರಗೆ ವಿದ್ಯಾರ್ಥಿನಿಯರು, ಅವರ ಹೆತ್ತವರೆಲ್ಲ ಸೇರಿರುವುದು ಹಾಗೂ ಅಲ್ಲಿ ಗೊಂದಲ ಸೃಷ್ಟಿಯಾಗಿರುವ ವೀಡಿಯೋಗಳು ಹರಿದಾಡಿದ ನಂತರ ಸ್ಥಳಕ್ಕೆ ಪೊಲೀಸರು ಧಾವಿಸಿದ್ದರು.

ಹೆತ್ತವರು ಮತ್ತು ಕಾಲೇಜು ಆಡಳಿತದೊಂದಿಗೆ ಪೊಲೀಸರು ನಂತರ ಚರ್ಚೆ ನಡೆಸಿದರು. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ತೆಗೆಯಲು ಒಪ್ಪಿದರೂ ತರಗತಿಯಲ್ಲಿ ಶಿರವಸ್ತ್ರ ಧರಿಸುವುದಾಗಿ ಹೇಳಿದರು. ಕಾಲೇಜು ಆಡಳಿತ ಇದಕ್ಕೆ ಒಪ್ಪಿದ ನಂತರ ಸಮಸ್ಯೆ ಇತ್ಯರ್ಥವಾಯಿತು.

ತರಗತಿಗೆ ಹಾಜರಾಗುವ ಮುನ್ನು ವಿದ್ಯಾರ್ಥಿನಿಯರು ಕಾಲೇಜಿನ ವಾಶ್‌ರೂಮಿನಲ್ಲಿ ಬುರ್ಖಾ ತೆಗೆಯಬೇಕೆಂದು ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News