×
Ad

ಕಾಂಗ್ರೆಸ್ ತೊರೆದ ಶಾಸ್ತ್ರಿ ಮೊಮ್ಮಗ

Update: 2024-02-14 21:30 IST

ವಿಭಂಕರ ಶಾಸ್ತ್ರಿ | Photo: ANI 

ಹೊಸದಿಲ್ಲಿ: ಮಾಜಿ ಪ್ರಧಾನಿ ದಿವಗಂತ ಲಾಲ್ ಬಹಾದೂರ್ಶಾಸ್ತ್ರಿ ಅವರ ಮೊಮ್ಮಗ ವಿಭಂಕರ ಶಾಸ್ತ್ರಿ ಅವರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ‘‘ಗೌರವಾನ್ವಿತ ಅಧ್ಯಕ್ಷ ಖರ್ಗೆಜಿಯವರೇ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ’’ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಅವರ ಪುತ್ರ ಹರಿಕೃಷ್ಣ ಶಾಸ್ತ್ರಿ ಅವರ ಮೊಮ್ಮಗನಾದ ವಿಭಂಕರ ಶಾಸ್ತ್ರಿ ಅವರು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಪ್ರಮುಖ ನಾಯಕರ ರಾಜೀನಾಮೆ ಸರಣಿಯನ್ನೇ ಕಂಡಿದೆ. ಅಶೋಕ ಚವಾಣ್, ಮಿಲಿಂದ ದೇವರಾ, ಬಾಬಾ ಸಿದ್ದೀಕಿ, ಜ್ಯೋತಿರಾದಿತ್ಯ ಸಿಂಧಿಯಾ, ಹಿಮಂತ ಬಿಶ್ವ ಶರ್ಮಾ,ಜಿತಿನ್ ಪ್ರಸಾದ್, ಪ್ರಿಯಾಂಕ ಚತುರ್ವೇದಿ, ಆರ್.ಪಿ.ಎನ್.ಸಿಂಗ್, ಜೈವೀರ್ ಶೆರ್ಗಿಲ್ ಕಾಂಗ್ರೆಸ್ ಪಕ್ಷ ತೊರೆದ ರಾಜಕೀಯ ನಾಯಕರಲ್ಲಿ ಪ್ರಮುಖರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News