ಜಿಎಸ್‌ಟಿಯಲ್ಲಿ ಸುಧಾರಣೆ, ದೀಪಾವಳಿಗೆ ತೆರಿಗೆ ಇಳಿಕೆ: ಪ್ರಧಾನಿ ಮೋದಿ ಘೋಷಣೆ
Update: 2025-08-15 12:27 IST
ಪ್ರಧಾನಿ ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ದೀಪಾವಳಿಯ ವೇಳೆಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯಲ್ಲಿ ಸುಧಾರಣೆಗಳನ್ನು ತಂದು ತೆರಿಗೆ ಹೊರೆ ಕಡಿಮೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.
79ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ದಿಲ್ಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಸರಕಾರ ಜಿಎಸ್ಟಿಯಲ್ಲಿ ಸುಧಾರಣೆಗಳನ್ನು ತರಲಿದೆ, ಇದು ಸಾಮಾನ್ಯ ಜನರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲಿದೆ. ಇದು ನಿಮಗೆ ದೀಪಾವಳಿ ಉಡುಗೊರೆಯಾಗಿರುತ್ತದೆ ಎಂದು ಹೇಳಿದರು.
ಈ ಸುಧಾರಣೆಗಳು ಜನಸಾಮಾನ್ಯರಿಗೆ ನೇರವಾಗಿ ಪ್ರಯೋಜನ ನೀಡಲಿದೆ. ತೆರಿಗೆ ಇಳಿಕೆಯಾಗಲಿದೆ ಮತ್ತು ನಮ್ಮ ಆರ್ಥಿಕತೆಯನ್ನು ಬಲಪಡಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.