×
Ad

ಗುಜರಾತ್ ಬಿಜೆಪಿ ಸಂಸದರ ಆಸ್ತಿಗಳು 10 ವರ್ಷಗಳ ಅಧಿಕಾರಾವಧಿಯಲ್ಲಿ ಹಲವು ಪಟ್ಟು ಹೆಚ್ಚಳ: ಎಡಿಆರ್

Update: 2026-01-07 21:40 IST

ಸಾಂದರ್ಭಿಕ ಚಿತ್ರ | Photo Credit ; PTI

ಅಹ್ಮದಾಬಾದ್: 2014, 2019 ಮತ್ತು 2024ರಲ್ಲಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿರುವ ಸಂಸದರ ಆಸ್ತಿಗಳ ಕುರಿತು ವರದಿಯೊಂದನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಟಿಸಿದೆ. ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಕೇಂದ್ರ ಸಚಿವ ಸಿ.ಆರ್.ಪಾಟೀಲ್ ಅವರನ್ನು ಹೊರತುಪಡಿಸಿ ಹೆಚ್ಚಿನ ಬಿಜೆಪಿ ಸಂಸದರ ಆಸ್ತಿಗಳು ಭಾರೀ ಬೆಳವಣಿಗೆಯನ್ನು ಕಂಡಿವೆ.

ಗುಜರಾತಿನಲ್ಲಿ ಕೇವಲ ಏಳು ಸಂಸದರು ಚುನಾವಣಾ ಹ್ಯಾಟ್ರಿಕ್ ಸಾಧಿಸಿದ್ದು, ಹೆಚ್ಚಿನವರ ಆಸ್ತಿಗಳು ಬಹುಪಟ್ಟು ಹೆಚ್ಚಾಗಿವೆ ಎಂದು ಎಡಿಆರ್ ವರದಿ ತಿಳಿಸಿದೆ.

ಈ ಪೈಕಿ ಸಂಸದೆ ಪೂನಮ್‌ಬೆನ್ ಮಾಡಮ್ ಅವರು ಅಗ್ರಸ್ಥಾನದಲ್ಲಿದ್ದು, 2014ರಲ್ಲಿ ಸುಮಾರು 17 ಕೋಟಿ ರೂ.ಗಳಷ್ಟಿದ್ದ ಅವರ ಆಸ್ತಿಗಳ ಮೌಲ್ಯ 2024ರಲ್ಲಿ 147 ಕೋಟಿ ರೂ.ಗೇರಿದೆ. ಒಂದೇ ದಶಕದಲ್ಲಿ ಅವರ ಆಸ್ತಿಗಳ ಮೌಲ್ಯ 130 ಕೋಟಿ ರೂ.ಗಳಷ್ಟು (ಶೇ.747) ಹೆಚ್ಚಾಗಿದೆ.

ಮಾಡಮ್ ಅವರು ಅತ್ಯಂತ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದರೆ,ಕಛ್ ಮೀಸಲು ಕ್ಷೇತ್ರದ ಸಂಸದ ವಿನೋದ ಲಕಮಶಿ ಚಾವ್ಡಾ ಅವರ ಆಸ್ತಿ ಮೌಲ್ಯ ಅತ್ಯಂತ ವೇಗವಾಗಿ ಬೆಳೆದಿದೆ. 2014ರಲ್ಲಿ ಕೇವಲ 56 ಲಕ್ಷ ರೂ.ಗಳಿದ್ದ ಅವರ ಆಸ್ತಿ ಮೌಲ್ಯ 2024ರಲ್ಲಿ 6.5 ಕೋಟಿ ರೂ.ಗೇರಿದೆ,ತನ್ಮೂಲಕ ಶೇ.1100ಕ್ಕೂ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News