×
Ad

Gujarat : ನೆರೆಹೊರೆಯವರ ಜಗಳದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

Update: 2026-01-26 22:13 IST

ಸಾಂದರ್ಭಿಕ ಚಿತ್ರ | Photo Credit : freepik.com

ಅಹ್ಮದಾಬಾದ್, ಜ.26: ಮನೆಯ ಹೊರಗೆ ಕುಳಿತುಕೊಳ್ಳುವ ಕುರಿತ ಕ್ಷುಲ್ಲಕ ವಿವಾದವು ಕ್ರೂರ ಹತ್ಯೆಗೆ ಕಾರಣವಾದ ಘಟನೆ ಗುಜರಾತ್‌ನ ಗಾಂಧಿಧಾಮದ ಸತ್ರಾಹಜಾರ್ ಜುನ್ಪಾಡಾ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ಮಧ್ಯವಯಸ್ಕ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ನೆರೆಕರೆಯವರು, ಜೀವಭಯದಿಂದ ಪರಾರಿಯಾಗಲು ಯತ್ನಿಸಿದ್ದ ಆತನನ್ನು ಬೆನ್ನಟ್ಟಿ, ಆತನ ಮನೆಯ ಬಾತ್‌ರೂಮಿನಲ್ಲಿ ಮೈಮೇಲೆ ಡೀಸಿಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತ ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಕರ್ಸನ್‌ಭಾಯಿ ಮಹೇಶ್ವರಿ ಮೃತವ್ಯಕ್ತಿಯಾಗಿದ್ದು, ಅವಿವಾಹಿತನಾಗಿದ್ದ ಆತ ತಾಯಿಯೊಂದಿಗೆ ವಾಸವಾಗಿದ್ದ. ಶುಕ್ರವಾರ ಮಧ್ಯಾಹ್ ನೆರೆಕರೆಯವರೊಂದಿಗೆ ನಡೆದ ಮಾಮೂಲು ಜಗಳ ಉಲ್ಬಣಗೊಂಡು ಆತನ ಜೀವವನ್ನು ಬಲಿಪಡೆದಿದೆ.

ಮೃತನ ಸೋದರನ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೂವರು ಮಹಿಳೆಯರು ಮತ್ತು ಓರ್ವ ಅಪರಿಚಿತ ಪುರುಷನನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News