ಗುಜರಾತ್| ಕೆಮ್ಮಿನ ಸಿರಪ್ ಕುಡಿದು 5 ವರ್ಷದ ಬಾಲಕಿ ಮೃತ್ಯು
Update: 2026-01-19 23:24 IST
Photo Credit : Freepik
ಅಹ್ಮದಾಬಾದ್, ಜ. 19: ಶೀತ ಹಾಗೂ ಕೆಮ್ಮಿನ ಸಿರಪ್ ಕುಡಿದು 5 ವರ್ಷದ ಬಾಲಕಿಯೋರ್ವಳು ಮೃತಪಟ್ಟ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ.
ಮೃತಪಟ್ಟ ಬಾಲಕಿಯನ್ನು ಧ್ಯಾನಿ ಥಕ್ಕರ್ ಎಂದು ಗುರುತಿಸಲಾಗಿದೆ.
ಧ್ಯಾನಿ ಥಕ್ಕರ್ ಸಾವಿನ ಹಿನ್ನೆಲೆಯಲ್ಲಿ ಆಕೆಯ ಚಿಕ್ಕಮ್ಮ ಔಷಧದ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ ಹಾಗೂ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.
ಧ್ಯಾನಿ ಚಿಕ್ಕ ಪ್ರಾಯದಲ್ಲೇ ತಾಯಿ ಹಾಗೂ ತಂದೆಯನ್ನು ಕಳೆದುಕೊಂಡಿದ್ದಳು. ಆಕೆಯನ್ನು ಅಜ್ಜಿ, ಅಜ್ಜ ಹಾಗೂ ಸಂಬಂಧಿಕರು ಪೋಷಿಸುತ್ತಿದ್ದರು.
ಆಕೆಯ ಚಿಕ್ಕಪ್ಪ ಮೆಡಿಕಲ್‌ವೊಂದರಿಂದ ತಂದ ಶೀತ ಹಾಗೂ ಕೆಮ್ಮಿನ ಸಿರಪ್ ಅನ್ನು ಧ್ಯಾನಿಗೆ ನೀಡಲಾಗಿತ್ತು. ಸಿರಪ್ ಕುಡಿದ ಕೂಡಲೇ ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಕೂಡಲೇ ಧ್ಯಾನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.