×
Ad

ಗುಜರಾತ್‌ನ ಮೀನುಗಾರ ಪಾಕಿಸ್ತಾನದ ಕಾರಾಗೃಹದಲ್ಲಿ ಮೃತ್ಯು

Update: 2026-01-19 22:56 IST

ಸಾಂದರ್ಭಿಕ ಚಿತ್ರ | Photo Credit ; PTI

ಹೊಸದಿಲ್ಲಿ: 2022ರಲ್ಲಿ ಶಿಕ್ಷೆ ಪೂರ್ಣಗೊಂಡ ಹೊರತಾಗಿಯೂ ಪಾಕಿಸ್ತಾನದ ಕರಾಚಿಯ ಕಾರಾಗೃಹದಲ್ಲಿದ್ದ ಗುಜರಾತ್‌ನ ಮೀನುಗಾರರೊಬ್ಬರು ಜನವರಿ 16ರಂದು ಮೃತಪಟ್ಟಿದ್ದಾರೆ ಎಂದು ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಜತಿನ್ ದೆಸಾಯಿ ತಿಳಿಸಿದ್ದಾರೆ.

2022ರ ಆರಂಭದಲ್ಲಿ ಅವರು ಹಾಗೂ 7ರಿಂದ 8 ಮಂದಿ ಮೀನುಗಾರರು ಪಾಕಿಸ್ತಾನದ ಜಲಭಾಗವನ್ನು ಪ್ರವೇಶಿಸಿದ್ದರು. ಈ ಸಂದರ್ಭ ಪಾಕಿಸ್ತಾನದ ನೌಕಾ ಪಡೆ ಅವರನ್ನು ಬಂಧಿಸಿತ್ತು. ಇವರಲ್ಲಿ ಒಬ್ಬರು ಮೀನುಗಾರರು ಜನವರಿ 16ರಂದು ಮೃತಪಟ್ಟಿದ್ದಾರೆ. ಉಳಿದ 7ರಿಂದ 8 ಮಂದಿ ಮೀನುಗಾರರು ಅದೇ ಕಾರಾಗೃಹದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಜಲ ಭಾಗದಲ್ಲಿ ಬಂಧಿತರಾಗಿರುವ ಭಾರತದ ಮೀನುಗಾರರ ಹಲವು ವರ್ಷಗಳಿಂದ ಹೋರಾಡುತ್ತಿರುವ ಶಾಂತಿ ಹೋರಾಟಗಾರ ದೇಸಾಯಿ ಮೃತಪಟ್ಟ ಮೀನುಗಾರನ ಹೆಸರನ್ನು ಬಹಿರಂಗಪಡಿಸಿಲ್ಲ.

ಕಾನ್ಸುಲರ್ ನೆರವು ನೀಡುವುದಕ್ಕೆ ಸಂಬಂಧಿಸಿ ಭಾರತ ಹಾಗೂ ಪಾಕಿಸ್ತಾನ ನಡುವೆ 2008ರಲ್ಲಿ ದ್ವಿಪಕ್ಷೀಯ ಒಪ್ಪಂದ ಏರ್ಪಟ್ಟಿವೆ. ಈ ಒಪ್ಪಂದದ ಪ್ರಕಾರ ಬಂಧಿತ ವ್ಯಕ್ತಿಗಳನ್ನು ಅವರ ರಾಷ್ಟ್ರೀಯತೆ ದೃಢಪಟ್ಟ ನಂತರ ಮತ್ತು ಅವರ ಶಿಕ್ಷೆ ಪೂರ್ಣಗೊಂಡ ಒಂದು ತಿಂಗಳೊಳಗೆ ಬಿಡುಗಡೆ ಮಾಡಿ ಅವರ ದೇಶಕ್ಕೆ ಕಳುಹಿಸಬೇಕು ಎಂದು ದೇಸಾಯಿ ಗಮನ ಸೆಳೆದಿದ್ದಾರೆ.

‘‘ಈ ಒಪ್ಪಂದದ ಪ್ರಕಾರ ಈ ಮೀನುಗಾರನನ್ನು ಮೊದಲೇ ಬಿಡುಗಡೆ ಮಾಡಬೇಕಿತ್ತು. ಆದರೆ, ಬಿಡುಗಡೆ ಮಾಡಿಲ್ಲ. ಆದುದರಿಂದ ಈ ಪ್ರಕ್ರಿಯೆ ಕಾರ್ಯರೂಪಕ್ಕೆ ಬರಬೇಕಾದರೆ, ಈ ಒಪ್ಪಂದವನ್ನು ಸಂಪೂರ್ಣವಾಗಿ ಹಾಗೂ ಪ್ರಾಮಾಣಿಕವಾಗಿ ಜಾರಿಗೆ ತರಬೇಕು’’ ಎಂದು ಹೇಳಿದ್ದಾರೆ.

ಕರಾಚಿಯ ಮಾಲಿರ್ ಕಾರಾಗೃಹದಲ್ಲಿ ಪ್ರತಿವರ್ಷ ಮೂರರಿಂದ ನಾಲ್ಕು ಮಂದಿ ಭಾರತೀಯ ಮೀನುಗಾರರು ಮೃತಪಟ್ಟಿದ್ದಾರೆ ಎಂದು ಪತ್ರರ್ಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಜತಿನ್ ದೇಸಾಯಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News