ಅತ್ಯಾಚಾರ ಪ್ರಕರಣ | ಶಿಕ್ಷೆ ಅಮಾನತುಗೊಳಿಸುವಂತೆ ಅಸಾರಾಮ್ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದ ಗುಜರಾತ್ ಹೈಕೋರ್ಟ್
Update: 2024-08-31 21:18 IST
PC : PTI
ಅಹಮದಾಬಾದ್ : 2013ರ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಸ್ವಘೋಷಿತ ದೇವಮಾನ ಅಸಾರಾಮ್ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿರುವ ಗುಜರಾತ್ ಹೈಕೋರ್ಟ್, ಈ ಅರ್ಜಿಯನ್ನು ಪರಿಗಣಿಸಲು ಯಾವುದೇ ವಿಶೇಷ ನೆಲೆಗಳಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
2023ರಲ್ಲಿ ಅಸಾರಾಮ್ ಅವರಿಗೆ ಗಾಂಧಿನಗರ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ಅಸಾರಾಮ್ ಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತುಗೊಳಿಸಿ, ಅವರಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ ನ್ಯಾ. ಇಲೇಶ್ ವೋರಾ ಹಾಗೂ ವಿಮಲ್ ವ್ಯಾಸ್ ಅವರನ್ನೊಳಗೊಂಡ ನ್ಯಾಯಪೀಠವು, ಈ ಪ್ರಕರಣದಲ್ಲಿ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿತು.
ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಅಸಾರಾಮ್ ಅವರನ್ನು ಸದ್ಯ ರಾಜಸ್ಥಾನದ ಜೋಧ್ ಪುರ್ ಕಾರಾಗೃಹದಲ್ಲಿಡಲಾಗಿದೆ.