ಗುಜರಾತ್ ರೋಪ್ ವೇ ದುರಂತ | ಆರು ಮಂದಿ ಮೃತ್ಯು
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್
X/screengrab
ಪಂಚಮಾಲ್ (ಗುಜರಾತ್): ಪಾವಗಢ ರೋಪ್ ವೇಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಾಲಿಯೊಂದು ಕುಸಿದು ಬಿದ್ದ ಪರಿಣಾಮ, ಆರು ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಗುಜರಾತ್ ನ ಪಂಚಮಾಲ್ ಜಿಲ್ಲೆಯ ಪಾವಗಢ ಬೆಟ್ಟ ದೇವಾಲಯದ ಬಳಿ ನಡೆದಿದೆ.
ಈ ಘಟನೆಯ ನಂತರದ ಭಯಾನಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
પાવાગઢમાં ગુડ્સ રોપ વે તૂટતા 6 લોકોના મોત
— Vinay Jagad (@VinayJagad1) September 6, 2025
પાવાગઢ ખાતે ચાલી રહેલા બાંધકામના માલસામાનને લાવવા લઈ જવા માટે રાખવામાં આવેલ ગુડ્ઝ રોપ વે તૂટી પડ્યું
મૃતકોમાં 2 લિફ્ટ ઓપરેટર, 2 શ્રમિકો અને અન્ય 2 વ્યક્તિઓનો સમાવેશ #pavagadh #panchmahal #ropeway #latestnews pic.twitter.com/GtYVFyxbSO
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸರಕು ಸಾಗಣೆ ರೋಪ್ ವೇಯ ತಂತಿಯೊಂದು ತುಂಡರಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. “ಗುಜರಾತ್ ನ ಪಂಚಮಾಲ್ ಜಿಲ್ಲೆಯ ಪಾವಗಢ ಬೆಟ್ಟ ದೇವಾಲಯದ ಬಳಿ ಸರಕು ಸಾಗಣೆ ರೋಪ್ ವೇಯ ತಂತಿ ತುಂಡರಿಸಿದ್ದರಿಂದ, ಆರು ಮಂದಿ ಮೃತಪಟ್ಟಿದ್ದಾರೆ” ಎಂದು ಗುಜರಾತ್ ಪೊಲೀಸರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
“ತಂತಿಗೆ ಸನಿಹವಿರುವ ಮೊದಲ ಗೋಪುರದ ತಳಹದಿಯ ಬಿಂದುವಿನಲ್ಲಿ ಈ ಪತನದ ತೀವ್ರತೆ ಕಂಡು ಬಂದಿದೆ” ಪಂಚಮಾಲ್ ಜಿಲ್ಲಾಧಿಕಾರಿ ಅಜಯ್ ದಹಿಯಾ ಹೇಳಿದ್ದಾರೆ.
ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಸ್ಥಳದಲ್ಲಿ ಅಗ್ನಿಶಾಮಕ ದಳದ ತಂಡಗಳು ಬೀಡು ಬಿಟ್ಟಿವೆ. ಈ ದೇವಾಲಯವು ಅಂದಾಜು 800 ಮೀಟರ್ ಎತ್ತರದಲ್ಲಿದ್ದು, ಯಾತ್ರಾರ್ಥಿಗಳು ಒಂದೋ 2,000 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನ ತಲುಪಬೇಕು ಅಥವಾ ಕೇಬಲ್ ಕಾರ್ ಮೂಲಕ ಮೇಲಕ್ಕೆ ತಲುಪಬೇಕು.
ಆದರೆ, ಪ್ರತಿಕೂಲ ಹವಾಮಾನದ ಕಾರಣ, ಈ ರೋಪ್ ವೇಯನ್ನು ಬೆಳಗ್ಗಿನಿಂದ ಸಾರ್ವಜನಿಕರಿಗೆ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.