×
Ad

ಅಹ್ಮದಾಬಾದ್ | ಪದೇ ಪದೇ ಅಳುತ್ತಿದ್ದ ಹಸುಗೂಸು ಟ್ಯಾಂಕ್‍ಗೆ ಎಸೆದು ಕೊಂದ ತಾಯಿ!

Update: 2025-04-10 08:24 IST

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್: ಪುಟ್ಟ ಮಗು ಪದೇ ಪದೇ ಅಳುವ ಮೂಲಕ ತೊಂದರೆ ಉಂಟುಮಾಡುತ್ತಿದೆ ಎಂದು ಕೋಪಗೊಂಡ 22 ವರ್ಷದ ತಾಯಿ ತನ್ನ ಗಂಡುಮಗುವನ್ನು ಮನೆಯ ಭೂಗತ ಟ್ಯಾಂಕ್‍ಗೆ ಎಸೆದು ಹತ್ಯೆ ಮಾಡಿರುವ ವಿಲಕ್ಷಣ ಘಟನೆ ವರದಿಯಾಗಿದೆ.

ಕರಿಷ್ಮಾ ಬಘೇಲ್ ಎಂಬ ಮಹಿಳೆ ಕಳೆದ ವಾರ ತನ್ನ ಮೂರು ತಿಂಗಳ ಗಂಡುಮಗು ಖಾಯಲ್ ಎಲ್ಲೂ ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದರು. ಈ ಬಗ್ಗೆ ಪತಿ ದಿಲೀಪ್ ಪೊಲೀಸರಿಗೆ ದೂರು ನೀಡಿದ್ದರು ಎಂದು ಮೇಘಾನಿನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಡಿ.ಬಿ.ಬಸಿಯಾ ಹೇಳಿದ್ದಾರೆ.

ತೀವ್ರ ಹುಡುಕಾಟದ ಬಳಿಕ ಮಗುವಿನ ಮೃತದೇಹ ಅಂಬಿಕಾನಗರ ಪ್ರದೇಶದಲ್ಲಿದ್ದ ಮನೆಯ ನೀರಿನ ಟ್ಯಾಂಕಿನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ತನಿಖೆ ನಡೆಸಿದ ಬಳಿಕ ತಾಯಿಯೇ ಮಗುವನ್ನು ಟ್ಯಾಂಕಿಗೆ ಎಸೆದಿರುವುದು ದೃಢಪಟ್ಟಿತು. ಮಹಿಳೆಯನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ ಎಂದು ಬಸಿಯಾ ವಿವರಿಸಿದ್ದಾರೆ.

"ಗರ್ಭಿಣಿಯಾದ ದಿನದಿಂದಲೂ ಕರಿಷ್ಮಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸ್ವಸ್ಥರಾಗಿದ್ದರು. ಪದೇ ಪದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು ಹಾಗೂ ಮಗುವನ್ನು ಹೊತ್ತಿರುವುದರಿಂದ ಹಲವು ಸಮಸ್ಯೆಗಳಾಗುತ್ತಿವೆ ಎಂದು ಕುಟುಂಬ ಸದಸ್ಯರಲ್ಲಿ ಹೇಳುತ್ತಿದ್ದರು. ಆರೋಪಿ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದುದು ಅನುಮಾನಕ್ಕೆ ಕಾರಣವಾಯಿತು. ವಿಚಾರಣೆಗೆ ಗುರಿಪಡಿಸಿದಾಗ ನಿಜಾಂಶ ಹೊರಬಿತ್ತು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News