ಹರ್ಯಾಣ: ಮುಸ್ಲಿಮರ ಪ್ರವೇಶ ನಿರ್ಬಂಧಿಸಿದ್ದ ಪಂಚಾಯತ್‌ಗಳಿಗೆ ನೋಟಿಸ್ ಜಾರಿಗೊಳಿಸಿದ್ದ IAS ಅಧಿಕಾರಿ ವರ್ಗಾವಣೆ
Update: 2023-08-22 18:22 IST
Mohammad Imran Raza (Photo: maktoobmedia.com)
ಹೊಸದಿಲ್ಲಿ: ನೂಹ್ ಗಲಭೆಗಳ ಹಿನ್ನೆಲೆಯಲ್ಲಿ ತಮ್ಮ ಗ್ರಾಮಗಳಿಗೆ ಮುಸ್ಲಿಮರ ಪ್ರವೇಶವನ್ನು ನಿರ್ಬಂಧಿಸಿ ನಿರ್ಣಯ ಅಂಗೀಕರಿಸಿದ, ಪತ್ರಗಳನ್ನು ಬರೆದ ಹಲವಾರು ಸರಪಂಚರು ಮತ್ತು ಪಂಚಾಯತ್ ಸದಸ್ಯರಿಗೆ ಶೋಕಾಸ್ ನೋಟಿಸ್ ನೀಡಿದ್ದ ರೆವಾರಿ ಜಿಲ್ಲಾಧಿಕಾರಿ ಮುಹಮ್ಮದ್ ಇಮ್ರಾನ್ ರಝಾ ಅವರನ್ನು ಹರ್ಯಾಣ ಸರ್ಕಾರ ವರ್ಗಾವಣೆ ಮಾಡಿದೆ. ರಝಾ ಸಹಿತ ಒಟ್ಟು 16 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಎಪ್ರಿಲ್ ತಿಂಗಳಿನಲ್ಲಿ ರೆವಾರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ರಝಾ ಅವರನ್ನು ಜಿಂದ್ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.
ಅವರು ಈ ಹಿಂದೆ ಹರ್ಯಾಣ ಗ್ರಾಮ ಪಂಚಾಯತಿ ರಾಜ್ ಕಾಯಿದೆಯ ಸೆಕ್ಷನ್ 51 ಅಡಿ ಹಲವು ಸರಪಂಚರು ಹಾಗೂ ಗ್ರಾಮ ಪಂಚಾಯತಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು. ಅವರ ಉತ್ತರಗಳ ಆಧಾರದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದರು.