×
Ad

ಹರ್ಯಾಣದಲ್ಲೂ ‘ವಂಚನೆ’ಯ ಚುನಾವಣೆ; ರಾಷ್ಟ್ರಮಟ್ಟದಲ್ಲಿ ಮತಗಳ್ಳತನ ನಡೆಯುತ್ತಿದೆ: ರಾಹುಲ್ ಗಾಂಧಿ ಸ್ಫೋಟಕ ಆರೋಪ

Update: 2025-11-05 12:38 IST

ಹೊಸದಿಲ್ಲಿ : “ಮತಗಳ್ಳತನ ಈಗ ಸ್ಥಳೀಯ ಮಟ್ಟಕ್ಕೆ ಸೀಮಿತವಿಲ್ಲ, ಇದು ರಾಷ್ಟ್ರಮಟ್ಟದ ಯೋಜಿತ ವಂಚನೆಯಾಗಿದೆ,” ಎಂದು ಕಾಂಗ್ರೆಸ್ ನ ಸಂಸದ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ, ನಕಲಿ ಮತದಾನ ಹಾಗೂ ಇವಿಎಂ ದುರುಪಯೋಗದಂತಹ ಘಟನೆಗಳು ನಡೆದಿರುವುದು ಬಹಿರಂಗವಾಗುತ್ತಿದೆ ಎಂದು ಹೇಳಿದರು.

“ಅಳಂದ, ಮಹದೇವಪುರದಲ್ಲಿ ನಾವು ಈ ಮಾದರಿಯ ವಂಚನೆ ಕಂಡಿದ್ದೆವು. ಇದೀಗ ಹರ್ಯಾಣದಲ್ಲೂ ಅದೇ ರೀತಿಯ ವಿಧಾನ ನಡೆಯುತ್ತಿದೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ನೇರ ದಾಳಿ,” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಚುನಾವಣಾ ಆಯೋಗದಿಂದ ತಕ್ಷಣದ ತನಿಖೆ ಹಾಗೂ ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News