ಹರ್ಯಾಣದ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಎಫ್‌ಐಆರ್‌ಗೆ ತಿದ್ದುಪಡಿ
Update: 2025-10-12 19:45 IST
ವೈ. ಪೂರನ್ ಕುಮಾರ್ | Photo Credit : NDTV
ಚಂಡೀಗಢ, ಅ. 12: ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲಿಗೆ ದಾಖಲಾಗಿದ್ದ ಎಫ್‌ಐಆರ್ ನಲ್ಲಿ, ಅವರ ಪತ್ನಿ ಅಮ್ನೀತ್ ಪಿ. ಅವರ ಮನವಿಯ ಮೇರೆಗೆ ಕಾಯ್ದೆಯ ಪ್ರಬಲ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಹಿರಿಯ ಐಎಎಸ್ ಅಧಿಕಾರಿಯಾಗಿರುವ ಅಮ್ನೀತ್ ಕುಮಾರ್ ಅವರು, “ಈ ಪ್ರಕರಣಕ್ಕೆ ಎಸ್‌ಸಿಎಸ್‌ಟಿ ಕಾಯ್ದೆಯ ಸೆಕ್ಷನ್ 3(2)(ವಿ) ಅನ್ವಯವಾಗುತ್ತದೆ” ಎಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪರಿಗಣಿಸಿ ಎಫ್‌ಐಆರ್‌ನಲ್ಲಿ ಅಗತ್ಯ ತಿದ್ದುಪಡಿ ಮಾಡಲಾಗಿದೆ ಎಂದು ಹರಿಯಾಣ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ.
ಪೂರನ್ ಕುಮಾರ್ ಅವರ ಕುಟುಂಬದವರು ಈ ಬೇಡಿಕೆ ಪೂರ್ಣಗೊಳ್ಳುವವರೆಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಲು ನಿರಾಕರಿಸಿದ್ದರು. ಇದೀಗ ಎಫ್‌ಐಆರ್ ತಿದ್ದುಪಡಿಯ ನಂತರ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಂದುವರಿಯುವ ನಿರೀಕ್ಷೆಯಿದೆ.