×
Ad

ಮಾಲೆಗಾಂವ್ ಸ್ಪೋಟ ಪ್ರಕರಣ | ಸಂತ್ರಸ್ತರ ಕುಟುಂಬಗಳಿಂದ ಮೇಲ್ಮನವಿ; 7 ಆರೋಪಿಗಳು, ಎನ್‌ಐಎಗೆ ಹೈಕೋರ್ಟ್ ನೋಟಿಸ್

Update: 2025-09-18 20:26 IST
PC : PTI 

ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡ 7 ಮಂದಿ ಆರೋಪಿಗಳಿಗೆ ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ನೋಟಿಸು ಜಾರಿ ಮಾಡಿದೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ಸಂತ್ರಸ್ತರ ಕುಟುಂಬದ ಸದಸ್ಯರು ಸಲ್ಲಿಸಿದ ಮೇಲ್ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ 7 ಮಂದಿ ಆರೋಪಿಗಳಿಗೆ ನೋಟಿಸು ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಗೌತಮ್ ಅಂಖಾಡ್ ಅವರ ಪೀಠ, ಪ್ರಾಸಿಕ್ಯೂಷನ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ ಹಾಗೂ ಮೇಲ್ಮನವಿ ವಿಚಾರಣೆಯನ್ನು 6 ವಾರಗಳ ಕಾಲ ಮುಂದೂಡಿದೆ.

ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ 6 ಮಂದಿಯ ಕುಟುಂಬದ ಸದಸ್ಯರು ಖುಲಾಸೆ ತೀರ್ಪು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಉಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಲೆಫ್ಟಿನೆಂಟ್ ಪ್ರಸಾದ್ ಪುರೋಹಿತ್ ಸೇರಿದಂತೆ ಪ್ರಕರಣದ 7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಈ ಮನವಿ ಪ್ರಶ್ನಿಸಿದೆ.

ತಪ್ಪಾದ ತನಿಖೆ ಅಥವಾ ತನಿಖೆಯಲ್ಲಿ ಕೆಲವು ದೋಷಗಳು ಆರೋಪಿಗಳ ಖುಲಾಸೆಗೆ ಆಧಾರವಲ್ಲ ಎಂದು ಕಳೆದ ವಾರ ಸಲ್ಲಿಸಲಾದ ಮೇಲ್ಮನವಿ ಪ್ರತಿಪಾದಿಸಿದೆ. ಸ್ಫೋಟದ ಪಿತೂರಿಯನ್ನು ರಹಸ್ಯವಾಗಿ ರೂಪಿಸಲಾಗಿದೆ. ಆದುದರಿಂದ ನೇರ ಪುರಾವೆಗಳು ಇಲ್ಲ ಎಂದು ಕೂಡ ಅದು ಪ್ರತಿಪಾದಿಸಿದೆ.

7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ಎನ್‌ಐಎ ನ್ಯಾಯಾಲಯ ಜುಲೈ 31ರಂದು ನೀಡಿದ ಆದೇಶ ತಪ್ಪಾಗಿದೆ ಹಾಗೂ ರದ್ದುಗೊಳಿಸಲು ಅರ್ಹವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News