×
Ad

ಹಿಂದೂಗಳು ಇಂಗ್ಲಿಷ್ ಮಾತನಾಡಬಾರದು, ಸಾಂಪ್ರದಾಯಿಕ ಉಡುಗೆ ಧರಿಸಬೇಕು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2025-02-06 12:39 IST

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (PTI)

ತಿರುವನಂತಪುರಂ: ಹಿಂದೂಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಸಾಂಪ್ರದಾಯಿಕ ಉಡುಪುಗಳನ್ನು ಮಾತ್ರ ಧರಿಸಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು, ಎಲ್ಲೂ ಇಂಗ್ಲಿಷ್‌ ನಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಚೆರುಕೊಲ್ಪುಳದಲ್ಲಿ ಹಿಂದೂ ಸಮಾವೇಶದ ಭಾಗವಾಗಿ ನಡೆಯುತ್ತಿರುವ 'ಹಿಂದೂ ಏಕತಾ ಸಮ್ಮೇಳನ'ವನ್ನು ಉದ್ಘಾಟಿಸಿ ಮಾತನಾಡಿದ ಮೋಹನ್ ಭಾಗವತ್, ಹಿಂದೂ ಧರ್ಮ ಸತ್ಯ, ದಯೆ, ನೈರ್ಮಲ್ಯ ಮತ್ತು ಧ್ಯಾನ ಎಂಬ ನಾಲ್ಕು ಸ್ತಂಭಗಳ ಮೇಲೆ ಸ್ಥಾಪಿತವಾಗಿದೆ. ಜಾತಿ ಆಧಾರಿತ ಶ್ರೇಣಿ ವ್ಯವಸ್ಥೆಗೆ ಅದರ ಮೂಲಭೂತ ಚೌಕಟ್ಟಿನೊಳಗೆ ಯಾವುದೇ ಸ್ಥಾನವಿಲ್ಲ. ʼಧರ್ಮʼ ಎಂಬ ಕಲ್ಪನೆ ಹಿಂದೂ ಧರ್ಮದ ಆತ್ಮವಾಗಿದ್ದು, ಪ್ರತಿಯೊಬ್ಬರೂ ಅದನ್ನು ಪಾಲಿಸಬೇಕು. ಪ್ರತಿ ಮನೆಯಲ್ಲಿ ವಾರಕ್ಕೊಮ್ಮೆಯಾದರೂ ಎಲ್ಲರೂ ಒಟ್ಟುಗೂಡಿ ನಮ್ಮ ಜೀವನಶೈಲಿ ಸಂಪ್ರದಾಯಕ್ಕೆ ಅನುಗುಣವಾಗಿದೆಯೇ ಎಂದು ಚರ್ಚಿಸಬೇಕು, ಪ್ರಾರ್ಥನೆಯನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ ಎಂದು theprint.in ವರದಿ ಮಾಡಿದೆ.

ನಾವು ಮಾತನಾಡುವ ಭಾಷೆ, ಪ್ರಯಾಣಿಸುವ ಸ್ಥಳಗಳು, ನಾವು ಧರಿಸುವ ಬಟ್ಟೆಗಳು ಸಂಪ್ರದಾಯಕ್ಕೆ ಹೋಲಿಕೆಯಾಗಿತ್ತಿದೆಯಾ ಎಂದು ಯೋಚಿಸಬೇಕು. ನಾವು ನಮ್ಮ ಸ್ವಂತ ಸ್ಥಳಗಳಿಗೆ ಪ್ರಯಾಣಿಸಬೇಕು, ನೆರವು ಅಗತ್ಯವಿರುವ ನಮ್ಮ ಸಹೋದರರನ್ನು ಭೇಟಿ ಮಾಡಬೇಕು. ನಾವು ಇಂಗ್ಲಿಷ್ ನಲ್ಲಿ ಮಾತನಾಡಬಾರದು, ನಮ್ಮ ಸ್ಥಳೀಯ ಆಹಾರಗಳನ್ನು ಮಾತ್ರ ಸೇವಿಸಬೇಕು. ಕಾರ್ಯಕ್ರಮಗಳಿಗೆ ಹಾಜರಾಗುವಾಗ ನಾವು ನಮ್ಮದೇ ಆದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು ಹೊರತು ಪಾಶ್ಚಿಮಾತ್ಯ ಉಡುಪುಗಳನ್ನಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಪರಿಸರ ಸಂರಕ್ಷಣೆಯಲ್ಲಿ ಹಿಂದೂ ಸಮುದಾಯ ಜವಾಬ್ಧಾರಿಯನ್ನು ಹೊಂದಿದೆ. ನೀರನ್ನು ಸಂರಕ್ಷಿಸಿ, ಸಸಿಗಳನ್ನು ನೆಡಬೇಕು, ಪ್ಲಾಸ್ಟಿಕ್ ಬಳಕೆಯನ್ನು ತಡೆಯಬೇಕು. ಇದು ಪ್ರತಿಯೋರ್ವ ಹಿಂದೂವಿನ ಕರ್ತವ್ಯ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News