×
Ad

ಹಿಂದುತ್ವ ಭಯೋತ್ಪಾದನೆಯ ಆರೋಪಿ ವೈಭವ್ ರಾವತ್ ಜೈಲಿನಿಂದ ಬಿಡುಗಡೆ: ಡಿಜೆ ಸಂಗೀತದೊಂದಿಗೆ ಅದ್ದೂರಿ ಸ್ವಾಗತ

Update: 2023-10-14 00:11 IST

ಮುಂಬೈ: ಹಿಂದುತ್ವ ಉಗ್ರವಾದಿ ಸಂಘಟನೆಯಾದ ಸನಾತನ ಸಂಸ್ಥೆಯ ಸದಸ್ಯ ವೈಭವ್ ರಾವತ್ ಜೈಲಿನಿಂದ ಬಿಡುಗಡೆಯಾಗಿದ್ದು, ಆತನಿಗೆ ಹಿಂದುತ್ವ ಬೆಂಬಲಿಗರು ನಲಸೋಪರದಲ್ಲಿ ಅದ್ದೂರಿ ಸ್ವಾಗತ ಕೋರಿದ್ದಾರೆ. ಆತನನ್ನು 2017ರಲ್ಲಿ ಪುಣೆಯಲ್ಲಿ ನಡೆದಿದ್ದ ಸನ್ ಬರ್ನ್ ಸಂಗೀತ ಹಬ್ಬದ ಸಂದರ್ಭದಲ್ಲಿ ಬಾಂಬ್ ಇಟ್ಟ ಆರೋಪದಡಿ ಬಂಧಿಸಲಾಗಿತ್ತು.

ವೈಭವ್ ರಾವತ್ ಅನ್ನು ಸ್ವಾಗತಿಸುವಾಗ ಕೇಸರಿ ವಸ್ತ್ರಗಳನ್ನು ಧರಿಸಿರುವ ಪುರುಷರು ಮತ್ತು ಮಹಿಳೆಯರು ಡಿಜೆ ಸಂಗೀತದ ರಾಗಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

2018ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ರಾವತ್ ಅನ್ನು ಬಂಧಿಸಿದಾಗಿನಿಂದ ಆತನನ್ನು ಅರ್ತೂರು ರಸ್ತೆ ಜೈಲಿನಲ್ಲಿರಿಸಲಾಗಿತ್ತು. 2018ರಲ್ಲಿ ಆತನನ್ನು ಬಂಧಿಸಿದ ನಂತರ ರಾವತ್ ನಿವಾಸದಲ್ಲಿನ ರಹಸ್ಯ ಕೋಣೆಯಲ್ಲಿ ಗಮನಾರ್ಹ ಪ್ರಮಾಣದ ದೇಶಿ ಪಿಸ್ತೂಲ್ ಗಳು, ಕಚ್ಚಾ ಬಾಂಬ್ ಗಳು, ವಿದ್ಯುನ್ಮಾನ ಸಾಧನಗಳು, ಏರ್ ಗನ್ ಗಳು, ಗುಂಡುಗಳು ಹಾಗೂ ವಿವಿಧ ದಾಖಲೆಗಳು ಸೇರಿದಂತೆ ಗಮನಾರ್ಹ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಾನೂನು ಜಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News