×
Ad

ಜಮ್ಮುಕಾಶ್ಮೀರ | ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿ ಶಂಕೆ : ಇಬ್ಬರು ಶಂಕಿತ ಭಯೋತ್ಪಾದಕರ ಮನೆ ಧ್ವಂಸ

Update: 2025-04-25 11:52 IST

Photo credit: PTI

ಹೊಸದಿಲ್ಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಸ್ಥಳೀಯ ಭಯೋತ್ಪಾದಕರಿಗೆ ಸೇರಿದ ಮನೆಗಳನ್ನು ಗುರುವಾರ ರಾತ್ರಿ ಅನಂತನಾಗ್ ಮತ್ತು ಅವಂತಿಪೋರಾದಲ್ಲಿ ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಭಯೋತ್ಪಾದಕ ಆದಿಲ್ ಥೋಕರ್ ಮತ್ತು ಆಸಿಫ್ ಶೇಖ್ ಮನೆಗಳನ್ನು ಧ್ವಂಸಗೊಳಿಸಲಾಗಿದೆ.

ಆದಿಲ್ ಥೋಕರ್ ಮನೆಯನ್ನು ಐಇಡಿ ಬಳಸಿ ಸ್ಫೋಟಿಸಿದರೆ, ಆಸಿಫ್ ಶೇಖ್ ನಿವಾಸವನ್ನು ಬುಲ್ಡೋಝರ್‌ನಿಂದ ಕೆಡವಲಾಗಿದೆ ಎಂದು ತಿಳಿದು ಬಂದಿದೆ.

ಮಾಧ್ಯಮ ವರದಿಗಳ ಪ್ರಕಾರ, 2018ರಲ್ಲಿ ಅಟ್ಟಾರಿ-ವಾಘಾ ಗಡಿಯ ಮೂಲಕ ಥೋಕರ್ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ತರಬೇತಿ ಪಡೆದು ಕಳೆದ ವರ್ಷ ರಹಸ್ಯವಾಗಿ ಜಮ್ಮು ಕಾಶ್ಮೀರಕ್ಕೆ ವಾಪಸಾಗಿದ್ದಾನೆ ಎಂದು ಹೇಳಲಾಗಿದೆ. ಗುಪ್ತಚರ ವರದಿಗಳ ಪ್ರಕಾರ, ಇತ್ತೀಚಿನ ದಾಳಿಯ ಸಮಯದಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಈತ ಮಾರ್ಗದರ್ಶನ ನೀಡಿದ್ದ ಎಂದು ಹೇಳಲಾಗಿದೆ.

ಕಾಶ್ಮೀರದಲ್ಲಿ 26 ಮಂದಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿ ಬಳಿಕ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಶಂಕಿತ ದಾಳಿಕೋರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ದಾಳಿಯಲ್ಲಿ ಮೂರರಿಂದ ನಾಲ್ಕು ಮಂದಿ ಭಯೋತ್ಪಾದಕರು ಭಾಗಿಯಾಗಿರುವ ಶಂಕೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News