×
Ad

ಕಡಲತೀರದಲ್ಲಿ ಸಿಲುಕಿಕೊಂಡ ಫೆರಾರಿ ಕಾರನ್ನು ಎಳೆತಂದ ಎತ್ತಿನ ಬಂಡಿ; ವಿಡಿಯೋ ವೈರಲ್

Update: 2025-01-01 15:42 IST

Screengrab:X/@ndtv

ಮುಂಬೈ: ರಾಯಗಢದ ರೆವ್‌ದಂಡಾ ಬೀಚ್‌ನಲ್ಲಿ ಫೆರಾರಿ ಕಾರು ಚಾಲನೆ ಮಾಡುತ್ತಿದ್ದ ದಂಪತಿ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಕಾರನ್ನು ಎತ್ತಿನ ಬಂಡಿಯಿಂದ ಎಳೆದು ರಕ್ಷಣೆ ಮಾಡಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಾತ್ಯಂತ ವೈರಲ್‌ ಆಗಿದೆ.

ಫೆರಾರಿ ಕಾರನ್ನು ಹಗ್ಗದ ಮೂಲಕ ಎತ್ತಿನ ಬಂಡಿಗೆ ಕಟ್ಟಲಾಗಿದೆ. ಬಳಿಕ ಎತ್ತುಗಳು ಐಷಾರಾಮಿ ಕಾರನ್ನು ಅನಾಯಾಸವಾಗಿ ಹೊರಕ್ಕೆ ಎಳೆದು ತೀರಕ್ಕೆ ತರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಈ ಕುರಿತು ರೇವದಂಡ ಕರಾವಳಿ ಪೊಲೀಸರು ಛತ್ರಪತಿ ಸಂಭಾಜಿನಗರದ ಫೆರಾರಿ ಮಾಲಕ ಅಭಿಷೇಕ್ ಜುಗಲ್ ಕಿಶೋರ್ ತಪಾಡಿಯಾ ವಿರುದ್ಧ ಅಜಾಗರೂಕತೆಯ ಚಾಲನೆ ಪ್ರಕರಣವನ್ನು ದಾಖಲಿಸಿದ್ದಾರೆ.

ಡಿಸೆಂಬರ್ 28 ರಂದು ನಡೆದ ಈ ಘಟನೆಯ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಬ್ಬ ಬಳಕೆದಾರನು "ಅಶ್ವಶಕ್ತಿ ವಿಫಲವಾದಾಗ, ಬುಲ್ ಪವರ್ ಮೇಲುಗೈ ಸಾಧಿಸುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬ ಬಳಕೆದಾರರು, "ಲ್ಯಾಂಬೊರ್ಗಿನಿಯು ಫೆರಾರಿಯನ್ನು ರಕ್ಷಣೆ ಮಾಡುತ್ತಿದೆ,” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News