ಶಿವಸೇನೆ (ಯುಬಿಟಿ)ಗೆ ಭಾರೀ ಹಿನ್ನಡೆ: ಬಿಜೆಪಿಗೆ ಸೇರಿದ ತೇಜಸ್ವಿ ಗೋಸಾಲ್ಕರ್
credit: economictimes
ಮುಂಬೈ,ಡಿ.15: ಶಿವಸೇನೆ (ಯುಬಿಟಿ)ಯ ಮಾಜಿ ಕಾರ್ಪೊರೇಟರ್ ಹಾಗೂ ಪಕ್ಷದ ಹಿರಿಯ ನಾಯಕ ವಿನೋದ ಘೋಸಾಲ್ಕರ್ ಅವರ ಸೊಸೆ ತೇಜಸ್ವಿ ಘೋಸಾಲ್ಕರ್ ಅವರು ಸೋಮವಾರ ಬಿಜೆಪಿಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿದ್ದು,ಇದು ವಿಶೇಷವಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಳ ಮುನ್ನ ಉದ್ಧವ ಠಾಕ್ರೆ ನೇತೃತ್ವದ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.
ತಿಂಗಳುಗಳ ಕಾಲ ಊಹಾಪೋಹಗಳ ಬಳಿಕ ಘೋಸಾಲ್ಕರ್ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಘೋಸಾಲ್ಕರ್ ಈ ವರ್ಷದ ಆರಂಭದಲ್ಲಿಯೇ ಬಿಜೆಪಿ ಸೇರಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಆಗ ಅವರನ್ನು ಮಹಿಳಾ ಸಂಘಟಕ್ ಆಗಿ ನೇಮಕಗೊಳಿಸುವ ಮೂಲಕ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಯುಬಿಡಿ ನಾಯಕತ್ವ ಪ್ರಯತ್ನಿಸಿತ್ತು. ಆದರೂ ಅಂತಿಮವಾಗಿ ಅವರು ಪಕ್ಷವನ್ನು ತೊರೆದಿದ್ದಾರೆ.
ಫೆ.2024ರಲ್ಲಿ ಕ್ಯಾಮೆರಾದಲ್ಲಿ ನೇರಪ್ರಸಾರದಲ್ಲಿ ಸೆರೆಯಾಗಿದ್ದ ಆಘಾತಕಾರಿ ಘಟನೆಯಲ್ಲಿ ತೇಜಸ್ವಿಯವರ ಪತಿ ಹಾಗೂ ಶಿವಸೇನೆ (ಯುಬಿಟಿ) ನಾಯಕ ಅಭಿಷೇಕ್ ಘೋಸಾಲ್ಕರ್ ಅವರನ್ನು ಫೇಸ್‌ಬುಕ್ ಲೈವ್‌ನಲ್ಲಿ ಇದ್ದಾಗಲೇ ಮೌರಿಸ್ ನೊರ್ಹೋನಾ ಎಂಬಾತ ಹಳೆಯ ದ್ವೇಷದಿಂದ ಗುಂಡಿಟ್ಟು ಹತ್ಯೆಗೈದಿದ್ದ.