ಹೈದರಾಬಾದ್ | ಥಾಯ್ಲೆಂಡ್ ನ ಸುಚಾತಾ ಚುಂಗ್ ಸಿರಿ ಗೆ ಮಿಸ್ ವರ್ಲ್ಡ್ ಕಿರೀಟ
Update: 2025-05-31 22:47 IST
Credit: Reuters Photo
ಹೈದರಾಬಾದ್: ನಿಝಾಮರ ನಗರಿ ಹೈದರಾಬಾದ್ ನಲ್ಲಿ ನಡೆದ 72ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಥಾಯ್ಲೆಂಡ್ ನ ಓಪ್ಲಾ ಸುಚಾತಾ ಚುಂಗ್ ಸಿರಿ ಅವರು ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಶನಿವಾರ ಸಂಜೆ ಹೈದರಾಬಾದ್‌ನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ವಿಶ್ವ ಸುಂದರಿ ಕಿರೀಟವು ಸುಚಾತಾ ಅವರ ಪಾಲಾಯಿತು. ಭಾರತವನ್ನು ಪ್ರತಿನಿಧಿಸಿದ್ದ ನಂದಿನಿ ಗುಪ್ತಾ ಅವರು ಟಾಪ್ 8ರಲ್ಲಿ ಸ್ಥಾನ ಪಡೆಯಲು ವಿಫಲರಾದರು.
ಥಾಯ್ಲೆಂಡ್ ನ ಓಪ್ಲಾ ಸುಚಾತಾ ಚುಂಗ್ ಸಿರಿ ಅವರಿಗೆ ಸುಮಾರು 8 ಕೋಟಿ ರೂಪಾಯಿಯ ಬೆಲೆ ಬಾಳುವ ವಜ್ರದ ಕಿರೀಟವನ್ನು ಮುಡಿಗೆ ಸಿಂಗರಿಸಲಾಯಿತು.