×
Ad

ವಿಪಕ್ಷಗಳನ್ನು ನನ್ನ ಶತ್ರುಗಳು ಎಂದು ಪರಿಗಣಿಸಿಲ್ಲ: ಪ್ರಧಾನಿ ಮೋದಿ

Update: 2024-05-25 14:38 IST

ನರೇಂದ್ರ ಮೋದಿ | PTI 

ಹೊಸದಿಲ್ಲಿ: ವಿಪಕ್ಷಗಳನ್ನು ನನ್ನ ಶತ್ರುಗಳು ಎಂದು ಪರಿಗಣಿಸಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ನಾನು ವಿಪಕ್ಷಗಳೊಂದಿಗೆ ಸಹಭಾಗಿತ್ವದ ಆಧಾರದಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

NDTV ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, “ನಾನೆಂದಿಗೂ ಸವಾಲು ಹಾಕುವುದಿಲ್ಲ ಹಾಗೂ ನನಗೆ ಅವರೆಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕಿದೆ. ನಾನು ಯಾರನ್ನೂ ಕಡೆಗಣಿಸುವುದಿಲ್ಲ. ಅವರು 60-70 ವರ್ಷಗಳ ಕಾಲ ಸರಕಾರ ರಚಿಸಿದ್ದಾರೆ. ಅವರು ಮಾಡಿರುವ ಕೆಲಸಗಳಿಂದ ನಾನು ಉತ್ತಮ ಸಂಗತಿಗಳನ್ನು ಕಲಿಯಲು ಬಯಸುತ್ತೇನೆ. ನಾನು ವಿಪಕ್ಷಗಳನ್ನು ನನ್ನ ಶತ್ರುಗಳು ಎಂದು ಪರಿಗಣಿಸಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಾನು ನನ್ನ ಅನುಭವಿ ವಿಪಕ್ಷ ನಾಯಕರ ರಚನಾತ್ಮಕ ಟೀಕೆಗಳು ಹಾಗೂ ಸಲಹೆಗಳಿಗೆ ಮುಕ್ತವಾಗಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಇದೇ ವೇಳೆ, ವಿರೋಧ ಪಕ್ಷಗಳ ದಾಳಿ, ತಮ್ಮ ಅಭಿವೃದ್ಧಿ ತಾತ್ವಿಕತೆ ಹಾಗೂ ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆ ಸೇರಿದಂತೆ ವೈವಿಧ್ಯಮಯ ವಿಷಯಗಳ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, “ನಾನು ಅವಿನಾಶಿ, ನಾನು ಕಾಶಿಯವನು (ವಾರಣಾಸಿ), ಕಾಶಿಯನ್ನು ನಾಶ ಮಾಡಲು ಅಸಾಧ್ಯ” ಎಂದೂ ಘೋಷಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News