×
Ad

ಭಾರತದ ಪ್ರಪ್ರಥಮ ರಾಷ್ಟ್ರೀಯ ಅಪರೂಪದ ರಕ್ತ ದಾನಿಗಳ ನೋಂದಣಿ ಪುಸ್ತಕ ಸಿದ್ಧಪಡಿಸಿದ ICMR

Update: 2025-06-21 19:35 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: ಪದೇ ಪದೇ ರಕ್ತಪೂರಣದ ಅಗತ್ಯ ಹೊಂದಿರುವ, ವಿಶೇಷವಾಗಿ ತಲಸ್ಸೇಮಿಯ ಹಾಗೂ ಸಿಕಲ್ ಸೆಲ್ ರೋಗದಂತಹ ಕಾಯಿಲೆ ಹೊಂದಿರುವ ಅಪರೂಪದ ಹಾಗೂ ಅಸಹಜ ರಕ್ತದ ಗುಂಪುಗಳನ್ನು ಹೊಂದಿರುವ ರೋಗಿಗಳಿಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಡಿ ಮುಂಬೈನಲ್ಲಿನ ರಾಷ್ಟ್ರೀಯ ಪ್ರತಿಕಾಯ ಶಾಸ್ತ್ರ ಸಂಸ್ಥೆಯು ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಅಪರೂಪದ ರಕ್ತದಾನಿಗಳ ನೋಂದಣಿ ಪುಸ್ತಕವನ್ನು ಸಿದ್ಧಪಡಿಸಿದೆ.

ಈ ಅಪರೂಪದ ರಕ್ತದಾನಿ ನೋಂದಣಿ ಪೋರ್ಟಲ್ ಅನ್ನು ಸದ್ಯ ರಕ್ತದ ಲಭ್ಯತೆಯ ಬಗ್ಗೆ ಮಾಹಿತಿ ಒದಗಿಸುವ ಇ-ರಕ್ತಕೋಶ್ ವೇದಿಕೆಯೊಂದಿಗೆ ಸಂಯೋಜಿಸುವ ಕುರಿತು ಆರೋಗ್ಯ ಸೇವೆಗಳ ಮಹಾ ನಿರ್ದೇಶಕರೊಂದಿಗೆ ಐಸಿಎಂಆರ್-ಎನ್ಐಐಎಚ್ ಮಾತುಕತೆ ನಡೆಸುತ್ತಿದೆ ಎಂದು ನಾಗಪುರದ ರಿಸರ್ಚ್ ಮ್ಯಾನೇಜ್ ಮೆಂಟ್ ಆ್ಯಂಡ್ ಕಂಟ್ರೋಲ್ ಆಫ್ ಹೆಮೊಗ್ಲೋಬಿನೊಪತೀಸ್ ನ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಮನೀಶ್ ಮಡ್ಕೈಕರ್ ತಿಳಿಸಿದ್ದಾರೆ.

ಈ ಸಂಯೋಜನೆಯಿಂದಾಗಿ, ಅಪರೂಪದ ರಕ್ತದ ಗುಂಪುಗಳನ್ನು ಹೊಂದಿರುವ ಜನರು ಸುಲಭವಾಗಿ ರಕ್ತದ ಗುಂಪುಗಳು ಹಾಗೂ ರಕ್ತ ಸಂಗ್ರಹಣಾ ಕೇಂದ್ರಗಳನ್ನು ಪತ್ತೆ ಹಚ್ಚಲು ಹಾಗೂ ರಕ್ತವನ್ನು ಪಡೆಯಲು ಸಹಾಯವಾಗಲಿದೆ. ಅಲ್ಲದೆ, ಈ ಸಂಯೋಜನೆಯಿಂದಾಗಿ, ರಕ್ತ ಸಂಗ್ರಹಣಾ ಕೇಂದ್ರಗಳು ತಮ್ಮ ರಕ್ತದ ಸಂಗ್ರಹ ಹಾಗೂ ದಾನಿಗಳನ್ನು ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಿರ್ವಹಿಸುವುದು ಸಾಧ್ಯವಾಗಲಿದೆ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯ ಪ್ರಕಾರ, 142 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ 4,000ಕ್ಕೂ ಹೆಚ್ಚು ಪರವಾನಗಿ ಹೊಂದಿರುವ ರಕ್ತ ಸಂಗ್ರಹಣಾ ಕೇಂದ್ರಗಳಿವೆ. ಪ್ರಸವದ ವೇಳೆ ಅತ್ಯಧಿಕ ಪ್ರಮಾಣದ ರಕ್ತ ಕಾಯಿಲೆಗಳಿಗೆ ತುತ್ತಾಗುವುದು ಹಾಗೂ ಸಂಕೀರ್ಣತೆಗೊಳಗಾಗುವುದು ಮುಂದುವರಿದಿರುವುದರಿಂದ, ಭಾರತವು ಬೃಹತ್ ಪ್ರಮಾಣದಲ್ಲಿ ರಕ್ತಪೂರಣವನ್ನು ಅವಲಂಬಿಸಿದೆ ಎಂದು ಡಾ. ಮಡ್ಕೈಕರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News