×
Ad

"ಸೈದ್ಧಾಂತಿಕ ದಿವಾಳಿತನ" ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2024-02-07 08:44 IST

Photo: fb.com/nitingadkary

ಮುಂಬೈ: ಸದ್ಯ ಆಡಳಿತ ನಡೆಸುವ ಪಕ್ಷದಲ್ಲಿ ಗುರುತಿಸಿಕೊಳ್ಳಲು ಬಯಸುವ ಅವಕಾಶವಾದಿ ರಾಜಕಾರಣಿಗಳ ಬಗ್ಗೆ ತೀವ್ರ ಆಂತಕ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇಂಥ "ಸೈದ್ಧಾಂತಿಕ ದಿವಾಳಿತನ" ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲೋಕಮಾತಾ ಮಾಧ್ಯಮ ಸಮೂಹ ಆಯೋಜಿಸಿದ್ದ, ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸಿದ್ಧಾಂತಕ್ಕೆ ಬದ್ಧವಾದ ಕೆಲ ವ್ಯಕ್ತಿಗಳು ಇದ್ದರೂ, ಅವರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಮಂಗಳವಾರ ಅವರು ಆತಂಕ ವ್ಯಕ್ತಪಡಿಸಿದರು.

"ತಮಾಷೆಯಾಗಿ ಹೇಳುವುದಾದರೆ ಯಾವುದೇ ಪಕ್ಷ ಅಧಿಕಾರದಲ್ಲಿರಲಿ; ಒಳ್ಳೆಯ ಕೆಲಸ ಮಾಡುವ ವ್ಯಕ್ತಿಗೆ ಗೌರವ ಸಿಗುವುದಿಲ್ಲ ಹಾಗೂ ಕೆಟ್ಟ ಕೆಲಸ ಮಾಡುವ ವ್ಯಕ್ತಿಗೆ ಎಂದೂ ಶಿಕ್ಷೆ ಸಿಗುವುದಿಲ್ಲ" ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಗಡ್ಕರಿ ಹೇಳಿದರು.

"ನಮ್ಮ ಚರ್ಚೆ ಮತ್ತು ವಾದದಲ್ಲಿ ಅಭಿಪ್ರಾಯ ಬೇಧ ಇರುವುದು ಸಮಸ್ಯೆಯಲ್ಲ. ಕಲ್ಪನೆಗಳೇ ಇಲ್ಲದಿರುವುದು ನಮ್ಮ ಸಮಸ್ಯೆ" ಎಂದು ವಿಶ್ಲೇಷಿಸಿದರು.

"ತಮ್ಮ ಸಿದ್ಧಾಂತಕ್ಕೆ ಬದ್ಧವಾಗಿ ದೃಢ ನಿಲುವು ಹೊಂದಿದ ವ್ಯಕ್ತಿಗಳಿದ್ದಾರೆ. ಆದರೆ ಅಂಥ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಿದ್ಧಾಂತಗಳು ಶಿಥಿಲವಾಗುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಬಲಪಂಥೀಯರಾಗಲೀ, ಎಡಪಂಥೀಯರಾಗಲೀ, ನಾವು ಅವಕಾಶವಾದಿಗಳು. ಎಲ್ಲರೂ ಆಡಳಿತ ಪಕ್ಷದ ಜತೆಗೆ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News