×
Ad

ನಿತೀಶ್‌ ಕುಮಾರ್‌ ಕಿಂಗ್‌ಮೇಕರ್‌ ಆಗಿದ್ದರೆ, ಬಿಹಾರಕ್ಕೆ ವಿಶೇಷ ಸ್ಥಾನಮಾನ ಲಭಿಸುವಂತೆ ಮಾಡಲಿ: ತೇಜಸ್ವಿ ಯಾದವ್

Update: 2024-06-06 12:21 IST

ನಿತೀಶ್‌ ಕುಮಾರ್‌ ,  ತೇಜಸ್ವಿ ಯಾದವ್ | PC : PTI 

ಹೊಸದಿಲ್ಲಿ: ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಯಲ್ಲಿ ತಮ್ಮ “ಕಿಂಗ್‌ಮೇಕರ್”‌ ಸ್ಥಾನವನ್ನು ಬಳಸಿಕೊಳ್ಳಬೇಕು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

“ಎನ್‌ಡಿಎಗೆ ಸಂಖ್ಯಾಬಲವಿದೆ ಹಾಗೂ ಕೇಂದ್ರದಲ್ಲಿ ರಚಿಸಲಾಗುವ ಸರ್ಕಾರ ಬಿಹಾರದ ಆಗ್ರಹ ಈಡೇರಿಸಿ ಅದಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ನಿತೀಶ್‌ ಕುಮಾರ್‌ ಕಿಂಗ್‌ಮೇಕರ್‌ ಆಗಿದ್ದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಗಿಟ್ಟಿಸುವ ಜೊತೆಗೆ ಇಡೀ ದೇಶದಲ್ಲಿ ಜಾತಿ ಜನಗಣತಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಯಾದವ್‌ ಹೇಳಿದರು.

“ಮೋದಿ ಮ್ಯಾಜಿಕ್‌ ಮುಗಿದಿದೆ, ಈಗ ಅವರು ಸರ್ಕಾರ ರಚನೆಗೆ ಮಿತ್ರಪಕ್ಷಗಳನ್ನು ಅವಲಂಬಿಸಬೇಕಿದೆ,” ಎಂದು ತೇಜಸ್ವಿ ಯಾದವ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News