ಲಷ್ಕರ್ ಭಯೋತ್ಪಾದಕ ರಝಾವುಲ್ಲಾ ಪಾಕ್ ನಲ್ಲಿ ಅಪರಿಚಿತರ ಗುಂಡಿಗೆ ಬಲಿ
ಹೊಸದಿಲ್ಲಿ: ಬೆಂಗಳೂರಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಭಾರತದಲ್ಲಿ ನಡೆದ ಮೂರು ಭಯೋತ್ಪಾದಕ ದಾಳಿಗಳ ರೂವಾರಿ ಎನ್ನಲಾದ ಲಷ್ಕರೆ ತಯ್ಯಬಾದ ಪ್ರಮುಖ ಉಗ್ರ ರಝಾವುಲ್ಲಾ ನಿಝಾಮಾನಿ ಯಾನೆ ಅಬು ಸೈಯುಲ್ಲಾನನ್ನು ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಅಪರಿಚಿತರು ರವಿವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ರಝಾವುಲ್ಲಾ ನಿಝಾಮಾನಿಗೆ ಪಾಕ್ ಸರಕಾರವು ಭದ್ರತಾ ವ್ಯವಸ್ಥೆಯನ್ನು ಒದಗಿಸಿತ್ತು. ಆತ ಮಧ್ಯಾಹ್ನ ಸಿಂಧ್‌ನ ಮಾಟ್ಲಿಯಲ್ಲಿರುವ ತನ್ನ ನಿವಾಸದಿಂದ ಹೊರತೆರಳುತ್ತಿದ್ದಾಗ ಸಮೀಪದ ಕ್ರಾಸಿಂಗ್ ಒಂದರಲ್ಲಿ ಅಪರಿಚಿತರು ಆತನ ಮೇಲೆ ಗುಂಡಿನ ದಾಳಿ ನಡೆಸಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ರಝಾವುಲ್ಲಾ ನಿಝಾಮಾನಿ 2001ರಲ್ಲಿ ಉತ್ತರಪ್ರದೇಶದ ರಾಮಪುರದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ, 2005ರಲ್ಲಿ ಬೆಂಗಳೂರಿನ ಐಐಎಸ್‌ಸಿಯಲ್ಲಿ ಬಾಂಬ್ ಸ್ಫೋಟ ಹಾಗೂ 2006ರಲ್ಲಿ ನಾಗಪುರದ ಆರೆಸ್ಸೆಸ್ ಮುಖ್ಯ ಕಾರ್ಯಾಲಯದ ಮೇಲೆ ಬಾಂಬ್ ದಾಳಿ ಪ್ರಕರಣಗಳ ಮಾಸ್ಟರ್‌ಮೈಂಡ್ ಆಗಿದ್ದ ಎನ್ನಲಾಗಿದೆ.