ಸಂಭಾಲ್ | ಹೆಚ್ಚಿನ ಡೆಸಿಬಲ್ ನಲ್ಲಿ ಧ್ವನಿವರ್ಧಕ ಬಳಕೆ ಆರೋಪ ; ಮಸೀದಿ ಇಮಾಮ್ ವಿರುದ್ಧ ಪ್ರಕರಣ ದಾಖಲು
Update: 2025-03-09 16:42 IST
ಸಾಂದರ್ಭಿಕ ಚಿತ್ರ (PTI)
ಲಕ್ನೋ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿ ಪ್ರದೇಶದ ಮಸೀದಿಯೊಂದರಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಡೆಸಿಬಲ್ ನಲ್ಲಿ ಧ್ವನಿವರ್ಧಕ ಬಳಸಿ ಆಝಾನ್ ಕರೆ ನೀಡಿದ್ದಾರೆಂದು ಆರೋಪಿಸಿ ಪೊಲೀಸರು ಮಸೀದಿಯ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮಸೀದಿಯ ಧ್ವನಿವರ್ಧಕವನ್ನು ವಶಪಡಿಸಿಕೊಂಡಿದ್ದಾರೆ.
ಸಂಭಾಲ್‌ನ ಪಂಜಾಬಿಯಾನ್ ಪ್ರದೇಶದ ಮಸೀದಿಯಲ್ಲಿ ಶನಿವಾರ ರಾತ್ರಿ ನ್ಯಾಯಾಲಯ ನಿಗದಿಪಡಿಸಿದ ಮಿತಿಗಳನ್ನು ಉಲ್ಲಂಘಿಸಿ ಆಝಾನ್ ಕರೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಸೀದಿಯ ಇಮಾಮ್ ಹಾಫಿಝ್ ಶಕೀಲ್ ಶಮ್ಸಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223, ಸೆಕ್ಷನ್ 270 ಮತ್ತು ಶಬ್ದ ಮಾಲಿನ್ಯ ನಿಯಂತ್ರಣ ನಿಯಮ- 2000ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.