×
Ad

ಕೃತಕ ಬುದ್ಧಿಮತ್ತೆ ಆಧಾರಿತ ಜಾಗತಿಕ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸಲು ಭಾರತ ಸಜ್ಜು: ಸಂಜಯ್ ಜಾಜು

Update: 2025-07-18 00:09 IST

ಬೆಂಗಳೂರು: ಕೃತಕ ಬುದ್ಧಿಮತ್ತೆ ಆಧಾರಿತ ಜಾಗತಿಕ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸಲು ಭಾರತ ಸಜ್ಜಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ತಿಳಿಸಿದ್ದಾರೆ.

ವೇವ್‌ಎಕ್ಸ್ ಸ್ಟಾರ್ಟ್ ಅಪ್ ಆಕ್ಸಿಲರೇಟರ್ ಪ್ಲಾಟ್ ಫಾರ್ಮ್‌ನಲ್ಲಿ ಕಲಾ ಸೇತು ಮತ್ತು ಭಾಷಾ ಸೇತು ಸವಾಲುಗಳಲ್ಲಿ ಭಾಗವಹಿಸಲು ಭಾರತದ ಪ್ರಮುಖ ಕೃತಕ ಬುದ್ಧಿಮತ್ತೆ ನವೋದ್ಯಮಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಆಹ್ವಾನಿಸಿದ್ದಾರೆ.

ಹೈದರಾಬಾದಿನ ಟಿ-ಹಬ್ ನಲ್ಲಿ ಎಐ/ಎಂಎಲ್ ಆಧಾರಿತ ತಂತ್ರಜ್ಞಾನ ಪರಿಹಾರಗಳ ಕುರಿತು ಕೆಲಸ ಮಾಡುತ್ತಿರುವ ದೇಶಾದ್ಯಂತದ ಇನ್ಕ್ಯುಬೇಟರ್ ಗಳು ಮತ್ತು ನವೋದ್ಯಮಗಳ ಕುರಿತು ಅವರು ಸಭೆ ನಡೆಸಿದರು.

ಟಿ-ಹಬ್‌ನ ಸಿಇಒಗಳು ಮತ್ತು ಟಿ-ಹಬ್‌ನಲ್ಲಿ ಇನ್ಕ್ಯುಬೇಟ್ ಮಾಡಲಾಗುತ್ತಿರುವ ನವೋದ್ಯಮಗಳ ಜೊತೆಗೆ, ಐಐಟಿ ಹೈದರಾಬಾದ್, ಎನ್‌ಐಟಿಗಳ ಶ್ರೇಷ್ಠತಾ ಕೇಂದ್ರಗಳು ಮತ್ತು ಸಕ್ರಿಯ ನಾವೀನ್ಯತೆ ಕೋಶಗಳನ್ನು ಹೊಂದಿರುವ ಇಂಜಿನಿಯರಿಂಗ್ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News