ಹರ್ಯಾಣ : ತರಬೇತಿ ವೇಳೆ ಜಾಗ್ವಾರ್ ಯುದ್ಧ ವಿಮಾನ ಪತನ
Update: 2025-03-07 17:45 IST
Photo credit: NDTV
ಚಂಡೀಗಢ : ಭಾರತೀಯ ವಾಯುಪಡೆಯ (ಐಎಎಫ್) ಜಾಗ್ವಾರ್ ಯುದ್ಧ ವಿಮಾನ ಶುಕ್ರವಾರ ಹರ್ಯಾಣದ ಪಂಚಕುಲ ಜಿಲ್ಲೆಯಲ್ಲಿ ಪತನಗೊಂಡಿದೆ.
ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಅಂಬಾಲಾ ವಾಯುನೆಲೆಯಿಂದ ತರಬೇತಿಗಾಗಿ ಟೇಕಾಫ್ ಆಗಿತ್ತು ಎಂದು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ. ವಿಮಾನ ಪತನಕ್ಕೆ ಮೊದಲು ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಕ್ಕೆ ಹಾರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಮಾನ ಪತನಕ್ಕೆ ಕಾರಣವನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.