×
Ad

ಭಾರತೀಯ ಸೇನೆಯಿಂದ ಆಕಾಶ ಪ್ರೈಮ್ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪರೀಕ್ಷೆ

Update: 2025-07-17 21:45 IST
PC :  X \ @Tar21Operator

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಸೇನೆಯು ಬುಧವಾರ ಲಡಾಖ್ ವಿಭಾಗದಲ್ಲಿ 15,000 ಅಡಿಗಳಿಗೂ ಹೆಚ್ಚು ಎತ್ತರದಲ್ಲಿ ಸ್ವದೇಶಿ ನಿರ್ಮಿತ ಆಕಾಶ ಪ್ರೈಮ್ ವಾಯು ರಕ್ಷಣಾ ವ್ಯವಸ್ಥೆಯ ಯಶಸ್ವಿ ಪ್ರಯೋಗಗಳನ್ನು ನಡೆಸಿದೆ.

ಸೇನೆಯ ವಾಯು ರಕ್ಷಣಾ ಪಡೆಯು ಡಿಆರ್‌ಡಿಒದ ಹಿರಿಯ ಅಧಿಕಾರಿಗಳೊಂದಿಗೆ ಈ ಪರೀಕ್ಷೆಗಳನ್ನು ನಡೆಸಿತು. ಆಕಾಶ ಪ್ರೈಮ್‌ ಅನ್ನು ಡಿಆರ್‌ಡಿಒ ಅಭಿವೃದ್ಧಿಗೊಳಿಸಿದೆ.

ಪರೀಕ್ಷೆಗಳ ಸಂದರ್ಭ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳು ಅತ್ಯಂತ ಎತ್ತರದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಗುರಿಯನ್ನು ಎರಡು ಸಲ ನೇರವಾಗಿ ಅಪ್ಪಳಿಸಿದ್ದವು.

ಆಕಾಶ ಪ್ರೈಮ್ ವ್ಯವಸ್ಥೆಯು ಭಾರತೀಯ ಸೇನೆಯಲ್ಲಿ ಆಕಾಶ ವಾಯು ರಕ್ಷಣಾ ವ್ಯವಸ್ಥೆಗಳ ಮೂರನೇ ಮತ್ತು ನಾಲ್ಕನೇ ರೆಜಿಮೆಂಟ್‌ಗಳನ್ನು ರೂಪಿಸಲಿದೆ.

ಆಪರೇಷನ್ ಸಿಂಧೂರ ಸಮಯದಲ್ಲಿ ಚೀನಾದ ವಿಮಾನಗಳು ಮತ್ತು ತುರ್ಕಿಯದ ಡ್ರೋನ್‌ ಗಳನ್ನು ಬಳಸಿ ಪಾಕಿಸ್ತಾನ ಸೇನೆಯು ನಡೆಸಿದ್ದ ವೈಮಾನಿಕ ದಾಳಿಗಳನ್ನು ವಿಫಲಗೊಳಿಸುವಲ್ಲಿಯೂ ಈ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿತ್ತು.

ಅಸ್ತಿತ್ವದಲ್ಲಿರುವ ಆಕಾಶ ವ್ಯವಸ್ಥೆಗೆ ಹೋಲಿಸಿದರೆ ಆಕಾಶ ಪ್ರೈಮ್ ಇತರ ಸುಧಾರಣೆಗಳೊಂದಿಗೆ ಹೆಚ್ಚಿನ ನಿಖರತೆಗಾಗಿ ಸ್ವದೇಶಿ ನಿರ್ಮಿತ ಸಕ್ರಿಯ ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News