×
Ad

ನೌಕಾಪಡೆಯ ಹೆಲಿಕಾಪ್ಟರ್‌ ಪತನ: ರನ್‌ವೇಯಲ್ಲಿದ್ದ ಅಧಿಕಾರಿ ಸಾವು

Update: 2023-11-04 16:06 IST

ಸಾಂದರ್ಭಿಕ ಚಿತ್ರ (ANI)

ಕೊಚ್ಚಿ: ಭಾರತೀಯ ನೌಕಾಪಡೆಯ ಚೇತಕ್‌ ಹೆಲಿಕಾಪ್ಟರ್‌ ಇಲ್ಲಿನ ನೌಕಾಪಡೆಯ ಮುಖ್ಯ ಕಾರ್ಯಾಲಯದ ಐಎನ್‌ಎಸ್‌ ಗರುಡಾ ರನ್‌-ವೇಯಲ್ಲಿ ಪತನಗೊಂಡ ಪರಿಣಾಮ ರನ್‌-ವೇಯಲ್ಲಿದ್ದ ಓರ್ವ ನೌಕಾಪಡೆ ಅಧಿಕಾರಿ ಮೃತಪಟ್ಟಿದ್ದಾರೆ. ಅಧಿಕಾರಿಗೆ ಹೆಲಿಕಾಪ್ಟರ್‌ನ ರೋಟರ್‌ ಬ್ಲೇಡ್‌ಗಳು ತಗಲಿ ಉಂಟಾದ ತೀವ್ರ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್‌ ಪೈಲಟ್‌ ಸಹಿತ ಅದರಲ್ಲಿದ್ದ ಇಬ್ಬರು ಗಾಯಗೊಂಡಿದ್ದು ನೌಕಾಪಡೆ ಮುಖ್ಯ ಕಾರ್ಯಾಲಯದ ಸಂಜೀವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಯಮಿತ ತರಬೇತಿ ವೇಳೆ ಇಂದು ಅಪರಾಹ್ನ ಸುಮಾರು 2.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಕೊಚ್ಚಿ ಬಂದರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News