×
Ad

ಭಾರತದ ದೊಡ್ಡ ಶತ್ರು ಇತರ ದೇಶಗಳ ಮೇಲಿನ ಅವಲಂಬನೆ : ಟ್ರಂಪ್‌ H-1B ವೀಸಾ ಶುಲ್ಕ ಘೋಷಿಸಿದ ಬಳಿಕ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

Update: 2025-09-20 19:41 IST

ನರೇಂದ್ರ ಮೋದಿ | PC : PTI 

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ H-1B ವೀಸಾಗೆ ವಾರ್ಷಿಕವಾಗಿ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿರುವ ಬಳಿಕ ನೀಡಿದ ಮೊದಲ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಇತರ ದೇಶಗಳ ಮೇಲಿನ ಅವಲಂಬನೆ ಭಾರತದ ದೊಡ್ಡ ಶತ್ರು ಎಂದು ಹೇಳಿದ್ದಾರೆ. ಭಾರತದ ಸ್ವಾವಲಂಬನೆಯ ಅಗತ್ಯದ ಬಗ್ಗೆ ಮಾತನಾಡಿದ್ದಾರೆ.

ಭಾರತ ಇಂದು 'ವಿಶ್ವಬಂಧು' ಮನೋಭಾವದೊಂದಿಗೆ ಮುಂದುವರಿಯುತ್ತಿದೆ. ಜಗತ್ತಿನಲ್ಲಿ ನಮಗೆ ಯಾವುದೇ ಪ್ರಮುಖ ಶತ್ರು ಇಲ್ಲ. ನಮ್ಮ ದೊಡ್ಡ ಶತ್ರು ಇತರ ದೇಶಗಳ ಮೇಲಿನ ಅವಲಂಬನೆ. ನಾವು ಒಟ್ಟಾಗಿ ಭಾರತದ ಈ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತವು ಆತ್ಮನಿರ್ಭರ (ಸ್ವಾವಲಂಬಿ) ಆಗಬೇಕು ಮತ್ತು ಪ್ರಪಂಚದ ಮುಂದೆ ಬಲಿಷ್ಠವಾಗಿ ನಿಲ್ಲಬೇಕು. ಭಾರತಕ್ಕೆ ಯಾವುದೇ ಸಾಮರ್ಥ್ಯದ ಕೊರತೆಯಿಲ್ಲ. ಆದರೆ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಭಾರತದ ಎಲ್ಲಾ ಸಾಮರ್ಥ್ಯವನ್ನು ನಿರ್ಲಕ್ಷಿಸಿದೆ ಎಂದು ಹೇಳಿದರು.

ಸ್ವಾತಂತ್ರ್ಯದ 6 ರಿಂದ 7 ದಶಕಗಳ ನಂತರವೂ, ಭಾರತವು ಅರ್ಹವಾದ ಯಶಸ್ಸನ್ನು ಸಾಧಿಸಿಲ್ಲ. ದೀರ್ಘಕಾಲದವರೆಗೆ, ಕಾಂಗ್ರೆಸ್ ಸರಕಾರ ದೇಶವನ್ನು ವಿಶ್ವ ಮಾರುಕಟ್ಟೆಯಿಂದ ಪ್ರತ್ಯೇಕಿಸಿತು. ನಂತರ, ಜಾಗತೀಕರಣದ ಯುಗ ಬಂದಾಗ, ಆಮದು ಮಾಡಿಕೊಳ್ಳುವ ಏಕೈಕ ಮಾರ್ಗವನ್ನು ಅನುಸರಿಸಿತು ಎಂದು ಪ್ರಧಾನಿ ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News