×
Ad

ಈ ತಿಂಗಳಲ್ಲಿ ತಲುಪಲಿದೆ ಭಾರತದ ಮೊದಲ ಮಿಲಿಟರಿ ಸಾರಿಗೆ ವಿಮಾನ

Update: 2023-09-07 21:20 IST

ಹೊಸದಿಲ್ಲಿ: ಭಾರತೀಯ ವಾಯು ಪಡೆಯು ಮೊದಲ ಏರ್‌ಬಸ್ ಸಿ-295 ಯುದ್ಧತಂತ್ರದ ಮಿಲಿಟರಿ ಸಾರಿಗೆ ವಿಮಾನವನ್ನು ಈ ತಿಂಗಳು ಪಡೆಯಲಿದೆ ಎಂದು ಯುರೋಪಿಯನ್ ಮೂಲದ ವಿಮಾನ ತಯಾರಕ ಸಂಸ್ಥೆ ತಿಳಿಸಿದೆ. "ಮೊದಲ C-295 ವಿಮಾನವನ್ನು ಈ ತಿಂಗಳಲ್ಲೇ ಭಾರತೀಯ ವಾಯುಪಡೆಗೆ ತಲುಪಿಸಲಾಗುವುದು" ಎಂದು ಏರ್‌ಬಸ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲಾರ್ಡ್ ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಾಯುಯಾನ ಕ್ಷೇತ್ರಕ್ಕೆ ಇಂಜಿನಿಯರ್‌ಗಳಿಗೆ ತರಬೇತಿ ನೀಡಲು ಏರ್‌ಬಸ್ ಗತಿ ಶಕ್ತಿ ವಿಶ್ವವಿದ್ಯಾಲಯದೊಂದಿಗೆ ಸಹಿ ಹಾಕಿದ ಬಳಿಕ ಮೈಲಾರ್ಡ್ ಅವರು ಸುದ್ದಿಗಾರರೊಂದಿಗೆ ಸಂವಾದ ನಡೆಸಿದರು. ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ವಿಆರ್ ಚೌಧರಿ ಅವರು ಮೊದಲ C-295 ವಿಮಾನವನ್ನು ತಲುಪಿಸಲು ಸ್ಪೇನ್‌ನ ಸೆವಿಲ್ಲೆಗೆ ಪ್ರಯಾಣಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತವು ಸೆಪ್ಟೆಂಬರ್ 2021 ರಲ್ಲಿ 56 ಮಿಲಿಟರಿ ಸಾರಿಗೆ ವಿಮಾನಗಳನ್ನು ಪೂರೈಸಲು ಏರ್‌ಬಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News