×
Ad

ರಶ್ಯಾದಿಂದ ಭಾರತದ ತೈಲ ಆಮದು ಇಳಿಕೆ: ಅಮೆರಿಕದಿಂದ ಸುಂಕದ ಕಡಿತದ ಸುಳಿವು ನೀಡಿದ ಬೆಸೆಂಟ್

Update: 2026-01-24 22:23 IST

ಸ್ಕಾಟ್ ಬೆಸೆಂಟ್ | PC : x/@NDTVProfitIndia

ಮುಂಬೈ: ಭಾರತವು ರಶ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ತೈಲದಲ್ಲಿ ಗಮನಾರ್ಹ ಪ್ರಮಾಣದ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ ವಿಧಿಸಿರುವ ಶೇ. 25ರಷ್ಟು ಸುಂಕವನ್ನು ಅಮೆರಿಕ ಹಿಂಪಡೆಯುವ ಸಾಧ್ಯತೆ ಇದೆ ಎಂಬ ಸುಳಿವನ್ನು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ನೀಡಿದ್ದಾರೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಶ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಶೇ. 25ರಷ್ಟು ಹೆಚ್ಚುವರಿ ಸುಂಕ ಸೇರಿದಂತೆ ಒಟ್ಟು ಶೇ. 50ರಷ್ಟು ಸುಂಕ ವಿಧಿಸಿದ್ದರು. ಇದರ ಪರಿಣಾಮವಾಗಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಬಿಗಡಾಯಿಸಿತ್ತು.

ಈ ಕುರಿತು ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ಪೊಲಿಟಿಕೊ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಸ್ಕಾಟ್ ಬೆಸೆಂಟ್, “ರಶ್ಯಾ ತೈಲ ಸಂಸ್ಕರಣಾ ಘಟಕಗಳಿಂದ ಭಾರತ ಖರೀದಿಸುತ್ತಿದ್ದ ತೈಲದ ಪ್ರಮಾಣ ಇಳಿಕೆಯಾಗಿದೆ. ಸುಂಕಗಳು ಈಗಲೂ ಜಾರಿಯಲ್ಲಿದ್ದು, ರಶ್ಯಾ ತೈಲದ ಮೇಲಿನ ಶೇ. 25ರಷ್ಟು ಸುಂಕವೂ ಜಾರಿಯಲ್ಲಿದೆ. ಅದನ್ನು ತೆಗೆದು ಹಾಕಲು ಮಾರ್ಗವಿದೆ ಎಂಬುದು ನನ್ನ ಅನಿಸಿಕೆಯಾಗಿದೆ” ಎಂದು ಹೇಳಿದ್ದಾರೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಭಾರತದ ರಶ್ಯಾ ತೈಲ ಆಮದು ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. ಅದಕ್ಕೆ ಪ್ರತಿಯಾಗಿ, ಒಪೆಕ್ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ತೈಲದ ಪ್ರಮಾಣ ಕಳೆದ 11 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿತ್ತು ಎಂದು ಭಾರತದ ವ್ಯಾಪಾರವನ್ನು ಉಲ್ಲೇಖಿಸಿ Reuters ಸುದ್ದಿ ಸಂಸ್ಥೆ ವರದಿ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News