×
Ad

ಇಂಡಿಗೊ ವಿಮಾನ ಹಾರಾಟದಲ್ಲಿ ಅಡಚಣೆ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ

Update: 2025-12-12 12:17 IST

Photo Credit: PTI

ಹೊಸದಿಲ್ಲಿ: ಇಂಡಿಗೊ ಏರ್‌ಲೈನ್ಸ್‌ನಲ್ಲಿ ನಡೆದ ವ್ಯಾಪಕ ವಿಮಾನ ಹಾರಾಟದ ಅಡಚಣೆಗಳ ಹಿನ್ನೆಲೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್ ಗಳನ್ನು ಸೇವೆಯಿಂದ ವಜಾಗೊಳಿಸಿದೆ.

ಈ ಕ್ರಮಕ್ಕೆ ನಿಖರವಾದ ಕಾರಣವನ್ನು ಅಧಿಕೃತವಾಗಿ ಪ್ರಕಟಿಸಲಾಗದಿದ್ದರೂ, ಚಳಿಗಾಲದ ವೇಳಾಪಟ್ಟಿಯಲ್ಲಿ ಇಂಡಿಗೊಗೆ 10% ಹೆಚ್ಚು ಹಾರಾಟಗಳ ಅನುಮತಿ ನೀಡುವ ಮೊದಲು ಪೈಲಟ್‌ ಗಳ ಲಭ್ಯತೆ, ಹೊಸ ಕರ್ತವ್ಯ ವಿಶ್ರಾಂತಿ ಮಾನದಂಡಗಳನ್ನು ಅನುಸರಿಸುವ ಸಿದ್ಧತೆ ಮೊದಲಾದ ವಿಚಾರಗಳಲ್ಲಿ ಡಿಜಿಸಿಎ ಏನು ಪರಿಶೀಲಿಸಿತ್ತು ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವಿಮಾನಯಾನದ ಪುನಃಸ್ಥಾಪನೆ, ಪೈಲಟ್‌ಗಳ ನೇಮಕಾತಿ ಹಾಗೂ ತೊಂದರೆ ಅನುಭವಿಸಿದ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಮರುಪಾವತಿ ಮತ್ತು ಪರಿಹಾರ ಕ್ರಮಗಳ ಬಗ್ಗೆ ವಿವರಿಸಲು, ಡಿಜಿಸಿಎ ಡಿಸೆಂಬರ್ 12, 2025 ರಂದು ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News