×
Ad

ಜೆಪಿ ಅವರಿಗೆ ವೈದ್ಯಕೀಯ ಚಿಕಿತ್ಸೆಗೆ 90,000 ರೂ. ನೀಡಿದ್ದ ಇಂದಿರಾ ಗಾಂಧಿ!

Update: 2025-06-25 21:45 IST

ಇಂದಿರಾ ಗಾಂಧಿ | PC : PTI 

ಹೊಸದಿಲ್ಲಿ: ತುರ್ತು ಪರಿಸ್ಥಿತಿ ಅವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತನ್ನ ಪ್ರಬಲ ಟೀಕಾಕಾರರಾಗಿದ್ದ ಜಯಪ್ರಕಾಶ್ ನಾರಾಯಣ (ಜೆಪಿ) ಅವರ ವೈದ್ಯಕೀಯ ಚಿಕಿತ್ಸೆಗೆ 90,000 ರೂ. ದೇಣಿಗೆ ಕಳುಹಿಸಿ ಕೊಟ್ಟಿದ್ದರು. ಆದರೆ, ಜೆಪಿ ಅವರು ಆ ಹಣವನ್ನು ತಿರಸ್ಕರಿಸಿ ಹಿಂದೆ ಕಳುಹಿಸಿದ್ದರು.

ಸುಗತಾ ಶ್ರೀನಿವಾಸರಾಜು ಅವರ ಹೊಸ ಪುಸ್ತಕ ‘ದಿ ಕಾನ್‌ಸಯನ್ಸ್ ನೆಟ್‌ವರ್ಕ್: ಎ ಕ್ರೋನಿಕಲ್ ಆಫ್ ರೆಸಿಸ್ಟೆನ್ಸ್ ಟು ಎ ಡಿಕ್ಟೇಟರ್‌ಶಿಪ್’ ಈ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದೆ.

ಆ ಸಂದರ್ಭ ಜೆಪಿ ಅವರ ಆರೋಗ್ಯ ಹದಗೆಟ್ಟಿತ್ತು. ಅವರು ಕಸ್ಟಡಿಯಲ್ಲಿರುವಾಗ ತಪಾಸಣೆ ಸಂದರ್ಭ ಮೂತ್ರಕೋಶ ವೈಫಲ್ಯವಾಗಿರುವುದು ಗೊತ್ತಾಗಿತ್ತು. ಆದುದರಿಂದ ಬದುಕುಳಿಯಲು ಅವರಿಗೆ ಡಯಾಲಿಸಿಸ್ ಮೆಶಿನ್ ಅವಶ್ಯಕತೆ ಇತ್ತು.

ತುರ್ತು ಪರಿಸ್ಥಿತಿ ಘೋಷಣೆಯಾದ ಕೂಡಲೇ 1975 ಜೂನ್ 26ರಂದು ಜೆಪಿ ಅವರನ್ನು ಬಂಧಿಸಲಾಗಿತ್ತು. ಅವರು ಚಂಡಿಗಢದ ಕಾರಾಗೃಹದಲ್ಲಿ 5 ತಿಂಗಳು ಕಳೆದಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ಅವರಿಗೆ 30 ದಿನಗಳ ಪರೋಲ್ ನೀಡಲಾಗಿತ್ತು.

ಜೆಪಿ ಅವರ ವೈದ್ಯಕೀಯ ಚಿಕಿತ್ಸೆಗೆ ಅವರ ಬೆಂಬಲಿಗರು ಹಣ ಸಂಗ್ರಹಿಸಲು ಪ್ರಯತ್ನಿಸಿದರು. ಸರಕಾರದಿಂದ ಸಹಾಯವನ್ನು ಸ್ವೀಕರಿಸದಿರಲು ನಿರ್ಧರಿಸಲಾಯಿತು. ಇದರ ಬದಲು ಸಾರ್ವಜನಿಕರಿಂದ ತಲಾ 1 ರೂ. ಸಂಗ್ರಹಿಸಲು ತೀರ್ಮಾನಿಸಿದರು. ಹಲವರು ಸರಕಾರಕ್ಕೆ ಹೆದರಿ ಹಣ ನೀಡಲು ನಿರಾಕರಿಸಿದ ಕಾರಣ ಹಣ ಸಂಗ್ರಹ ತುಂಬಾ ನಿಧಾನವಾಯಿತು.

ಈ ಸಂದರ್ಭ ಇಂದಿರಾ ಗಾಂಧಿ ಅವರು ದೇಣಿಗೆಯಾಗಿ 90,000 ರೂ.ನ ಚೆಕ್ ಕಳುಹಿಸಿದ್ದರು. ಆದರೆ, ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಲು ಭಾರತೀಯ ಪ್ರಜೆಗಳು ಅಮೆರಿಕದಲ್ಲಿ ರೂಪಿಸಿದ ಇಂಡಿಯನ್ಸ್ ಪಾರ್ ಡೆಮಾಕ್ರೆಸಿ (ಐಎಫ್‌ಡಿ) ಎಂದು ಕರೆಯಲಾಗುವ ಗುಂಪಿಗೆ ಇದು ಆಘಾತ ಉಂಟು ಮಾಡಿತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News