×
Ad

ಗಾಝಾದಲ್ಲಿ ಇಸ್ರೇಲ್ ವಾಯುದಾಳಿ | ಕನಿಷ್ಠ 17 ಫೆಲೆಸ್ತೀನಿಯರ ಮೃತ್ಯು

Update: 2024-08-17 22:11 IST

   ಸಾಂದರ್ಭಿಕ ಚಿತ್ರ

ಕೈರೋ : ಯುದ್ದಪೀಡಿತ ಗಾಝಾದ ಝವಾಯ್‌ ದಾ ಪಟ್ಟಣದಲ್ಲಿ ಇಸ್ರೇಲ್ ಶನಿವಾರ ನಸುಕಿನಲ್ಲಿ ನಡೆಸಿದ ಭೀಕರ ಕ್ಷಿಪಣಿದಾಳಿಯಲ್ಲಿ ಕನಿಷ್ಠ 17 ಮಂದಿ ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಈ ಆಕ್ರಮಣದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಮೃತರಲ್ಲಿ ಎಂಟು ಮಕ್ಕಳು ಹಾಗೂ ನಾಲ್ವರು ಮಹಿಳೆಯರೆಂದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಇಸ್ರೇಲ್‌ನ ಸೇನಾ ವಕ್ತಾರರಬ್ಬರು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅರೇಬಿಕ್ ಭಾಷೆಯಲ್ಲಿ ನೀಡಿದ ಸೂಚನೆಯೊಂದರಲ್ಲಿ ಮಘಾಝಿ ಜಿಲ್ಲೆ ಸೇರಿದಂತೆ ಕೇಂದ್ರ ಗಾಝಾ ಪ್ರದೇಶದಿಂದ ಜನರು ನಿಯೋಜಿತ ಮಾನವೀಯ ರಕ್ಷಣಾ ವಲಯಕ್ಕೆ ತೆರಳುವಂತೆ ತಿಳಿಸಿದೆ.

ರಾಕೆಟ್‌ ದಾಳಿ ನಡೆಸುತ್ತಿರುವ ಹಮಾಸ್ ಹೋರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆಯೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News